ಮೊದಲ ದಿನವೇ ಬಿಗ್ ಬಾಸ್  ಮನೆಯಿಂದ ಹೊರ ಬಂದ ರವಿ ಬೆಳಗೆರೆ…?

ಬೆಂಗಳೂರು,ಅ,14,(www.justkannada.in): ಈ ಬಾರಿಯ ಬಿಗ್ ಬಾಸ್ ಅತ್ಯಂತ ಕುತೂಹಲ ಕೆರಳಿಸಿದ್ದು, ಪ್ರಮುಖ ಆಕರ್ಷಣೆ ಕೇಂದ್ರ ಬಿಂದುವಾಗಿ ರವಿಬೆಳೆಗೆರೆ  ಮೊದಲ ದಿನವೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

.ಬಿಗ್‍ಬಾಸ್‍ಗೆ ಎಂಟ್ರಿಕೊಟ್ಟಿದ್ದ ಮೂರನೇ ಸ್ಪರ್ಧಿ ರವಿಬೆಳಗೆರೆ ಬಿಗ್‍ಬಾಸ್‍ ಅನುಮತಿ ಪಡೆದು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಬಿಗ್‍ಬಾಸ್‍ ಶುರುವಿನಲ್ಲಿ ಕಾಣಿಸಿಕೊಂಡಿದ್ದ ರವಿಬೆಳಗೆರೆ ನಂತರದ ಸಮಯದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ಬಿಗ್‍ಬಾಸ್ ಪ್ರವೇಶಿಸಿ ಕೆಲಕಾಲ ಕುರಿ ಪ್ರತಾಪ್ ಜೊತೆ ಬಿಗ್‍ಬಾಸ್ ಮನೆ ಸುತ್ತುವರಿದು, ನಂತರ ಸಿಗರೇಟ್‍ಗಾಗಿ ರವಿಬೆಳಗೆರೆ ಬೇಡಿಕೆ ಇಟ್ಟಿದ್ದರು. ಇದೀಗ ಒಂದೇ ದಿನಕ್ಕೆ ರವಿಬೆಳಗೆರೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಇದಕ್ಕೆ ಅನಾರೋಗ್ಯ ಕಾರಣ ಎಂದು ಹೇಳಲಾಗುತ್ತಿದೆ.