Monday, September 14, 2026

BDA Apartments

ಮೈಸೂರು ಡಾಗ್ ಸ್ಕ್ವಾಡ್ ಗೆ “ಬೆಲ್ಜಿಯಂ ಮಾಲಿನೋಯಿಸ್” ತಳಿಯ ವಿಶೇಷ ಶ್ವಾನ ಸೇ...
Home Front Page ಮೈಸೂರು ಡಾಗ್ ಸ್ಕ್ವಾಡ್  ಗೆ  “ಬೆಲ್ಜಿಯಂ ಮಾಲಿನೋಯಿಸ್” ತಳಿಯ ವಿಶೇಷ ಶ್ವಾನ ಸೇರ್ಪಡೆ

ಮೈಸೂರು ಡಾಗ್ ಸ್ಕ್ವಾಡ್  ಗೆ  “ಬೆಲ್ಜಿಯಂ ಮಾಲಿನೋಯಿಸ್” ತಳಿಯ ವಿಶೇಷ ಶ್ವಾನ ಸೇರ್ಪಡೆ

ಮೈಸೂರು,ಮಾರ್ಚ್,08,2021(www.justkannada.in) : ಬಹುಪ್ರತಿಭೆಯ ಬೆಲ್ಜಿಯಂ ಮಾಲಿನೋಯಿಸ್ ತಳಿಯ ವಿಶೇಷ ಶ್ವಾನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದೆ.

jkಇವತ್ತಿನ ಮಾರುಕಟ್ಟೆ ಮೌಲ್ಯ 1ಲಕ್ಷದ 50ಸಾವಿರ ರೂ.

ಇದೇ ಮೊದಲ ಬಾರಿಗೆ ಮೈಸೂರು ಡಾಗ್ ಸ್ಕ್ವಾಡ್ ನಲ್ಲಿ ಈ ತಳಿಯ ನಾಯಿ ಸೇರ್ಪಡೆಯಾಗಿದೆ. ಈ ಶ್ವಾನವು ಎರಡು ತಿಂಗಳ ಮರಿಯಾಗಿದ್ದು, ನಾಯಿ ಮರಿಯ ಇವತ್ತಿನ ಮಾರುಕಟ್ಟೆ ಮೌಲ್ಯ 1ಲಕ್ಷದ 50ಸಾವಿರ ರೂ. ಆಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿ ಬೆಂಗಳೂರಿನಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಇದೊಂದು ಮಾತ್ರ ಇದೆ. ಹೆಚ್ಚು ಎಚ್ಚರಿಕೆ ಮತ್ತು ಆತ್ಮವಿಶ್ವಾಸದ ಶ್ವಾನ ಎಂದು ಗುರುತಿಸಲಾಗಿದೆ.

Mysore-Dog Squad-"Belgium Malinois"-Breed-Special-Dog-Inclusion 

ಪ್ರಮೋದ್ ಅವರಿಂದ ಪೊಲಿಸ್ ಇಲಾಖೆಗೆ ಉಚಿತವಾಗಿ ಇಂದು ಹಸ್ತಾಂತರಿಸಲಾಯಿತು. ಸೇನೆಯಲ್ಲಿ ಇದರ ಬಳಕೆ ಹೆಚ್ಚಾಗಿದೆ. ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಶಿವರಾಜ್ ಅವರಿಗೆ ಪ್ರಮೋದ್ ಅವರು ನಾಯಿ ಹಸ್ತಾಂತರ ಮಾಡಿದರು. ಈ ವೇಳೆ ಇನ್ಸ್‌ಪೆಕ್ಟರ್ ಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮತ್ತಿತರರು ಇದ್ದರು.

key words : Mysore-Dog Squad-“Belgium Malinois”-Breed-Special-Dog-Inclusion