ಬಂಡಿದಾರಿ ಒತ್ತುವರಿ ತೆರವು: ಕೋಟ್ಯಾಂತರ ಬೆಲೆ ಬಾಳುವ ಜಾಗ ಜಿಲ್ಲಾಡಳಿತದ ವಶ.

ಮೈಸೂರು,ಜನವರಿ.17,2022(www.justkannada.in): ಜಮೀನಿನ ಮಧ್ಯೆ ಹಾದುಹೋಗಿರುವ ಬಂಡಿದಾರಿ ಒತ್ತುವರಿಯನ್ನ ತೆರುವುಗೊಳಿಸಿದ ಜಿಲ್ಲಾಡಳಿತ ಕೋಟ್ಯಾಂತರ ಮೌಲ್ಯದ ಜಾಗವನ್ನ ವಶಪಡಿಸಿಕೊಂಡಿದೆ. ಒತ್ತುವರಿ ಆಗಿರುವ ಬಗ್ಗೆ ದೂರು ಬಂದ ಹಿನ್ನಲೆ ಇಂದು ಅಳತೆ ಮಾಡಿ ಬಂಡಿದಾರಿಯನ್ನ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ.522,521,605,606,607 ರಲ್ಲಿ ಹಾದುಗೋಗಿರುವ ಬಂಡಿದಾರಿ ಒತ್ತುವರಿ ಆಗಿದ್ದು ತೆರುವುಗೊಳಿಸುವಂತೆ ಸಾರ್ವಜನಿಕರೊಬ್ಬರು  ದೂರು ನೀಡಿದ್ದರು. ಈ ಹಿನ್ನಲೆ ಕ್ರಮ ಕೈಗೊಳ್ಳಲು ಮುಂದಾದ ತಹಸೀಲ್ದಾರ್ ರಕ್ಷಿತ್  ಇಂದು ಎನ್.ಆರ್.ಠಾಣೆ ಪೊಲೀಸರ ಭದ್ರತೆಯೊಂದಿಗೆ ಅಳತೆ ಮಾಡಿಸಿ ಒತ್ತುವರಿ ಖಚಿತ ಪಡಿಸಿಕೊಂಡು ತೆರುವುಗೊಳಿಸಿದ್ದಾರೆ.ತಹಸೀಲ್ದಾರ್ ರಕ್ಷಿತ್ ಆದೇಶದ ಮೇರೆಗೆ ಕಸಬ ಆರ್.ಐ.ರಾಘವೇಂದ್ರ,ಸಿದ್ದಲಿಂಗಪುರ ವೃತ್ತದ ವಿ.ಎ.ಅರ್ಜುನ್ ರಾಯ್, ಸರ್ವೆಯರ್ ವೆಂಕಟೇಶ್ ಹಾಗೂ ಗ್ರಾಮ ಸಹಾಯಕ ರಾಮಚಂದ್ರ ತೆರುವು ಕಾರ್ಯಾಚರಣೆ ನಡೆಸಿದ್ದಾರೆ.

Key words: mysore- District administration- Detained-place