ಮಾಧ್ಯಮದ ಸಹಕಾರಕ್ಕೆ ಧನ್ಯವಾದ ಹೇಳಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಒಂದ್ ಮನವಿ ಮಾಡಿಕೊಂಡ್ರು..!

ಮೈಸೂರು, ಅ.09, 2020 : (www.justkannada.in news) : ಮೈಸೂರಿನ ಮಾಧ್ಯಮ ಮಿತ್ರರು, ಕರೋನಾ ಸಂಕಷ್ಟದ ಸಮಯದಲ್ಲಿ ನೀಡುತ್ತಿರುವ ಸಹಕಾರಕ್ಕೆ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಧನ್ಯವಾದ ಹೇಳಿದ್ದಾರೆ.

ಈ ಸಂಬಂಧ ಮೈಸೂರು ವಾರ್ತ ಇಲಾಖೆ ವಾಟ್ಸ್ ಅಪ್ ಗ್ರೂಪ್ ನಲ್ಲಿ ಹೇಳಿಕೆ ನೀಡಿರುವ ಡಿಸಿ ರೋಹಿಣಿ ಸಿಂಧೂರಿ ಹೇಳಿರುವುದಿಷ್ಟು…
ವಿವಿಧ ಮಾಧ್ಯಮ ಪ್ರತಿನಿಧಿಗಳು ಮಾಹಿತಿಗಾಗಿ ನನಗೆ ಪ್ರತ್ಯೇಕವಾಗಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಆದರೆ ಈ ಎಲ್ಲಾ ಕರೆಗಳಿಗೂ ಖುದ್ದು ನಾನೇ ಉತ್ತರಿಸುವ ಸ್ಥಿತಿಯಲ್ಲಿಲ್ಲ ಇಲ್ಲ ಎಂದು ವಿಷಾಧಿಸಿರುವ ಅವರು, ಇದಕ್ಕೆ ಕಾರಣವನ್ನು ನೀಡಿದ್ದಾರೆ.

ಮೈಸೂರಿನಲ್ಲಿ ಕೋವಿಡ್ ಸೋಂಕು ತೀವ್ರವಾಗುತ್ತಿದೆ. ಆದ್ದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆಗೂಡಿ ತುರ್ತಾಗಿ ಕೆಲಸ ಮಾಡಬೇಕಾಗಿದೆ. ಹಾಗಾಗಿ ವರದಿಗಾರರಿಗೆ ಪ್ರತ್ಯೇಕವಾಗಿ ಉತ್ತರಿಸುವುದು ತುಂಬಾ ಕಷ್ಟ ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂಬಂಧಿಸಿದ ಮಾಹಿತಿಯನ್ನು ವಾರ್ತಾ ಇಲಾಖೆ ವಾಟ್ಸ್ ಅಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗುವುದು ಮತ್ತು ವರದಿಗಾರರ ಯಾವುದೇ ಪ್ರಶ್ನೆಗಳಿದ್ದರೆ ಅದನ್ನು ದಯವಿಟ್ಟು ಜಿಲ್ಲಾ ಮಾಹಿತಿ ಅಧಿಕಾರಿ ಮೂಲಕ ಹಂಚಿಕೊಳ್ಳಿ ಎಂದು ವಿನಂತಿಸಿದ್ದಾರೆ.

jk-logo-justkannada-logo

ಇದೇ ವೇಳೆ, ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ನಿರಂತರವಾಗಿ ಸಹಕಾರ ನೀಡುತ್ತಿರುವುದಕ್ಕಾಗಿ ಎಲ್ಲಾ ಮಾಧ್ಯಮಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಿಮ್ಮ ನಿರಂತರ ಸಕಾರಾತ್ಮಕ ಸಹಕಾರಕ್ಕೆ ಎದುರು ನೋಡುತ್ತೇನೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ooooo

key words : Mysore-DC-rohini-sindhuri-media-co.operation-thanks-request-for-support

 

ENGLISH SUMMARY :

Request to media

Many from the media are calling me individually for information.
I would like to appeal to all of you to understand that it would be very difficult to answer individually as we are working on containing the pandemic which is very severe in Mysuru, Information will be shared in this group and if there are any queries pls ask them here or through the district information officer.

Mysore-DC-rohini-sindhuri-media-co.operation-thanks-request-for-support
I would like to thank all the media for their continuous proactive approach in giving information to the public on the pandemic and look forward to your continuous positive service. All feedback in this regard is most welcome.

Thank you.

Rohini Sindhuri
DC, Mysuru