Wednesday, October 7, 2026

BDA Apartments

immense respect BDA JK_Adv BDA Adv
Home Front Page ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ಅರ್ಚಕರಿಗೆ ಕೊರೊನಾ ಸೋಂಕು: ದೇಗುಲಕ್ಕೆ ನೋ ಎಂಟ್ರಿ

ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ಅರ್ಚಕರಿಗೆ ಕೊರೊನಾ ಸೋಂಕು: ದೇಗುಲಕ್ಕೆ ನೋ ಎಂಟ್ರಿ

ತಿರುವನಂತಪುರ, ಅಕ್ಟೊಬರ್,09,2020 (www.justkannada.in):: ಕೇರಳದ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಅಕ್ಟೋಬರ್ 15ರ ತನಕ ಭಕ್ತರಿಗೆ ದೇಗುಲ ಪ್ರವೇಶ ನಿರ್ಬಂಧಿಸಲಾಗಿದೆ. ದೈನಂದಿನ ಪೂಜೆಯನ್ನು ತಂತ್ರಿಗಳು ನೆರವೇರಿಸಲಿದೆ. ಆದರೆ, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಪದ್ಮನಾಭ ಸ್ವಾಮಿ ದೇಗುಲದ ಕಾರ್ಯಕಾರಿ ಅಧಿಕಾರಿ ರಥೀಶನ್ ಐಎಎಸ್ ತಿಳಿಸಿದ್ದಾರೆ.

ಪದ್ಮನಾಭ ಸ್ವಾಮಿ ದೇಗುಲದ ಇಬ್ಬರು ಮುಖ್ಯ ಅರ್ಚಕರು, 8 ಸಹಾಯಕ ಅರ್ಚಕರು ಹಾಗೂ ಇಬ್ಬರು ಕಾವಲುಗಾರರಿಗೆ ಕೋವಿಡ್-19 ಸೋಂಕು ತಗಲಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.