Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್’ಗೆ ಬಿಗ್ ರಿಲೀಫ್

ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್’ಗೆ ಬಿಗ್ ರಿಲೀಫ್

ಜಾರ್ಖಂಡ್, ಅಕ್ಟೊಬರ್,09,2020 (www.justkannada.in): ಮೇವು ಹಗರದಲ್ಲಿ ಜೈಲು ಸೇರಿರುವಂತ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೌದು. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಚಾಯ್ಬಾಸಾ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ದುಮ್ಕಾ ಖಜಾನೆ ಪ್ರಕರಣ ಇನ್ನೂ ಬಾಕಿ ಇರುವುದರಿಂದ ಅವರು ಜೈಲಿನಲ್ಲಿಯೇ ಇರುತ್ತಾರೆ.

ಜೈಲೇ ಗತಿ: ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಆದ್ರೇ ದುಮ್ಕಾ ಖಜಾನೆ ಪ್ರಕರಣ ಸಂಬಂಧ ಜಾಮೀನು ನೀಡದೇ ಇರುವ ಕಾರಣ, ಲಾಲು ಪ್ರಸಾದ್ ಗೆ ಮೇವು ಹಗರಣದಲ್ಲಿ ಜಾಮೀನು ದೊರೆತರೂ ದುಮ್ಕಾ ಖಜಾನೆ ಪ್ರಕರಣದಲ್ಲಿ ಜೈಲಿನಲ್ಲಿಯೇ ಇರುವಂತೆ ಆಗಿದೆ.