ಪಾಸ್ ಇದ್ದರೂ ಅರಮನೆ ಪ್ರವೇಶಕ್ಕೆ ನಿರಾಕರಣೆ ಆರೋಪ; ಪೊಲೀಸರ ವಿರುದ್ದ ಸಾರ್ವಜನಿಕರಿಂದ ಅಸಮಾಧಾನ…

Promotion

ಮೈಸೂರು,ಅ,8,2019(www.justkannada.in): ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಜಂಬೂ ಸವಾರಿ ಮೆರವಣಿಗೆ  ಕಣ್ತುಂಬಿಕೊಳ್ಳಲು ಸಾಕಷ್ಟು ಜನಸಾಗರ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಗ್ಗೆ ಇಟ್ಟಿದ್ದು ಈ ನಡುವೆ ಪಾಸ್ ಇದ್ದರೂ ಅರಮನೆ ಪ್ರವೇಶಕ್ಕೆ ನಿರಾಕರಿಸಿದ ಪೊಲೀಸರ ವಿರುದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಾರ್ವಜನಿಕರು ಸಾವಿರಾರು ರೂ ಹಣ ನೀಡಿ ಮೈಸೂರು ದಸರಾ ವೀಕ್ಷಿಸಲು ಪಾಸ್ ಖರೀದಿಸಿದ್ದಾರೆ. ಆದರೆ ಪಾಸ್ ಹೊಂದಿರುವವರು ಬೆಳಿಗ್ಗೆಯೇ ಬರಬೇಕೆಂದು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಅರಮನೆ ಪ್ರವೇಶಕ್ಕೆ ಕಾತರದಿಂದ ಬಂದಿದ್ದ ಜನತೆ ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಭದ್ರತೆ ಹೆಸರಿನಲ್ಲಿ ಜನರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಪಾಸ್ ಹೊಂದಿರುವವರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Key words: mysore dasara- pass- Access -public- -against – police