ಜಂಬೂ ಸವಾರಿ ಮೆರವಣಿಗೆ ವೇಳೆ ಕಣ್ಮನ ಸೆಳೆಯಲಿವೆ ಸ್ತಬ್ದಚಿತ್ರಗಳು…

ಮೈಸೂರು,ಅ,8,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಯ  ಪ್ರಮುಖ ಆಕರ್ಷಣೆ ಸ್ತಬ್ದ ಚಿತ್ರಗಳು. ಈ ಬಾರಿಯೂ ಸ್ತಬ್ದಚಿತ್ರಗಳು ಜನರ ಮನಸೂರೆಗೊಳಿಸಲು ಸಜ್ಜಾಗಿವೆ.

ಕ್ಯಾಪ್ಟನ್ ಅರ್ಜುನ ಅಂಬಾರಿ ಹೊತ್ತು ಹೆಜ್ಜೆ ಹಾಕುವ ಮಾರ್ಗದಲ್ಲಿ ವಿವಿಧಬಗೆಯ ಸ್ತಬ್ದ ಚಿತ್ರಗಳು ಸಾಗಲಿವೆ. ಈ ಮೂಲಕ ಜಂಬೂ ಸವಾರಿ ವೀಕ್ಷಕರ ಕಣ್ಮನ ಸೆಳಯಲಿವೆ.  ಈ ಬಾರಿ  30 ಜಿಲ್ಲೆಗಳಿಂದ ವಿವಿಧ ಬಗೆಯೆ 38ಸ್ತಬ್ದಚಿತ್ರಗಳನ್ನ ತಯಾರಿಸಲಾಗಿದ್ದು ಈಗಾಗಲೇ ಅರಮನೆ ಅಂಗಳಕ್ಕೆ ಸ್ತಬ್ದಚಿತ್ರಗಳು ಆಗಮಿಸಿವೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ  30ಸ್ತಬ್ದ ಚಿತ್ರಗಳು ತಯಾರಿಸಲಾಗಿದ್ದು , ಮೈಸೂರು ಜಿಲ್ಲಾಡಳಿತದಿಂದ  4 ಸ್ತಬ್ದ ಚಿತ್ರಗಳು ಹಾಗೂ ದಸರಾ ಉಪ ಸಮಿತಿಯಿಂದ 4ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 38ಸ್ತಬ್ದ ಚಿತ್ರಗಳು  ಅರ್ಜುನನ ಮುಂದೆ ಸಾಗಲಿವೆ.

Key words: mysore dasara-2019-jamboo savari-tablo