ಮೈಸೂರು ದಸರಾ ಜಂಬೂ ಸವಾರಿ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಾಡಿನ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ ಸಿಎಂ ಬಿಎಸ್ ವೈ…

ಮೈಸೂರು,ಅ,8,2019(www.justkannada.in):  ಅರಮನೆ ಬಲರಾಮ ದ್ವಾರದ ಬಳಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಮಧ್ಯಾಹ್ನ 2.15ರ  ಶುಭ ಮಕರ ಲಗ್ನದಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಡಿಸಿಎಂ ಗೋವಿಂದ ಕಾರಜೋಳ ಸೇರಿ ಹಲವರು ಸಾಥ್ ನೀಡಿದರು.

ಮಹೇಶಯ್ಯ, ಮಹದೇವಪ್ಪ ಉಡಿಗಾಲ ಅವರು ಜೋಡಿ ನಂದಿಧ್ವಜ ಹೊತ್ತಿ ಕುಣಿದರು. ಕಿರಾಳು ಮಹೇಶ್, ರುದ್ರಪ್ಪ ಮತ್ತು ತಂಡದಿಂದ ವೀರಗಾಸೆ ನಡೆಯುತ್ತಿದೆ. ಇನ್ನು   ನಿಶಾನೆ ನೌಪತ್ ಆನೆ  ಮೆರವಣಿಗೆ ಸಾಗಿದೆ.

Key words:  mysore dasara- cm bs yeddyurappa- nandidwaja- special worship