ಮೈಸೂರಿನ ಪ್ರಥಮ ಪ್ರಜೆಗೆ ಈ ಬಾರಿ ದಸರಾದಲ್ಲಿ ಕುದುರೆ ಸವಾರಿ ಭಾಗ್ಯ ಇಲ್ಲ.

ಮೈಸೂರು,ಅಕ್ಟೋಬರ್,5,2021(www.justkannada.in):   ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಾರಂಭಕ್ಕೆ ಎರಡೇ ದಿನ ಬಾಕಿ ಇದ್ದು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಈ ನಡುವೆ ಅಕ್ಟೋಬರ್ 15 ರಂದು ಜಂಬೂ ಸವಾರಿ ನಡೆಯಲಿದ್ದು ಆ ವೇಳೆ ಮೈಸೂರು ಮೇಯರ್ ಕುದುರೆ ಏರಿ ಬರವುದು ವಾಡಿಕೆ. ಆದರೆ ಈ ಬಾರಿ ಮೈಸೂರಿನ ಪ್ರಥಮ ಪ್ರಜೆಗೆ ಈ ಬಾರಿ ಕುದುರೆ ಸವಾರಿ ಭಾಗ್ಯ ಇಲ್ಲ.

ಹೌದು, ಕೊರೋನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುತ್ತಿದ್ದು , ಜಂಬೂ ಸವಾರಿ ಮೆರವಣಿಗೆಯೂ ಮೈಸೂರು ಅರಮನೆಗೆ ಸೀಮಿತವಾಗಲಿದೆ. ಹೀಗಾಗಿ  ಮೈಸೂರಿನ ಪ್ರಥಮ ಪ್ರಜೆಗೆ ಈ ಬಾರಿ ದಸರಾದಲ್ಲಿ ಕುದುರೆ ಸವಾರಿ ಭಾಗ್ಯ ಇಲ್ಲ ಇರುವುದಿಲ್ಲ.

ಜಂಬೂ ಸವಾರಿ ವೇಳೆ ಮೈಸೂರು ಮೇಯರ್ ಕುದುರೆ ಏರಿ ಬರವುದು ದೇಶದ ಇತಿಹಾಸದಲ್ಲಿ ಇರುವ ವಿಶೇಷ ಸಂಪ್ರದಾಯ. ಆದರೆ ಇದಕ್ಕೆ ಈ ಬಾರಿ ಅವಕಾಶ ಇಲ್ಲ. ಕೋವಿಡ್ ನಿಯಮದಿಂದಾಗಿ ಬಿಜೆಪಿಯ ಮೇಯರ್ ಸುನಂದಾ ಪಾಲನೇತ್ರ ಕುದುರೆ ಸವಾರಿ ಭಾಗ್ಯದಿಂದ ಅವಕಾಶ ವಂಚಿತರಾಗಿದ್ದಾರೆ.

ಕಳೆದ ಬಾರಿಯೂ ಸರಳ ದಸರಾ ಹಿನ್ನೆಲೆ ಮೈಸೂರು ಮೇಯರ್ ಗೆ ಈ ಅವಕಾಶ ಕೈತಪ್ಪಿತ್ತು. ಹಾಗೆಯೇ ಬಿಜೆಪಿ ಪ್ರಥಮ ಮೈಸೂರು ಮೇಯರ್ ಸುನಂದಾ ಪಾಲನೇತ್ರಗೂ ಇಲ್ಲ ಅವಕಾಶ. ಪಾರಂಪರಿಕೆ ಉಳಿಸುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಿಲ್ಲ.  ಅರಮನೆ ಆವರಣದಲ್ಲಾದರೂ ಮೇಯರ್  ಕುದುರೆ ಸವಾರಿಗೆ ಅವಕಾಶ ಕೇಳಲಾಗಿತ್ತು. ಅವಕಾಶ ನೀಡಿಲ್ಲ ಎನ್ನಲಾಗಿದೆ.

Key words: mysore dasara- jamboosavari- Mysore mayor- horse  riding