ಉಡುಪಿ ಚಿತ್ರದುರ್ಗದಲ್ಲಿ ಕೊರೋನಾಗೆ ತಲಾ ಒಬ್ಬರು ಬಲಿ…

ಚಿತ್ರದುರ್ಗ/ಉಡುಪಿ,ಜು,21,2020(www.justkannada.in): ಮಹಾಮಾರಿ ಕೊರೋನಾಗೆ ಉಡುಪಿ ಓರ್ವ ವ್ಯಕ್ತಿ ಮತ್ತು ಚಿತ್ರದುರ್ಗದಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ.jk-logo-justkannada-logo

ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯೂರಿನ ನಿವಾಸಿ 63 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ವೃದ್ಧ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.corona-death-udupi-chitradurga

ಉಡುಪಿಯಲ್ಲಿ 35 ವರ್ಷದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ. ಉಡುಪಿಯ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಕೇರಳಾದ ಕಣ್ಣೂರಿನ ನಿವಾಸಿಯಾಗಿದ್ದು, ಕಿಡ್ನಿ ಸಮಸ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಜೂನ್ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

Key words: Corona- death-Udupi -Chitradurga