ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಯಲ್ಲಿ ಬಿರುಕು ವಿಚಾರ: ಸ್ಥಳಕ್ಕೆ ಇತಿಹಾಸ ತಜ್ಞ ಡಾ.ರಂಗರಾಜು ಭೇಟಿ, ಪರಿಶೀಲನೆ…

ಮೈಸೂರು,ಫೆ,20,2020(www.justkannada.in): ಮೈಸೂರು ನಗರ ಹೃದಯಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಮೆ ಸ್ಥಳಕ್ಕೆ ಇತಿಹಾಸ ತಜ್ಞ ಡಾ.ರಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಇತಿಹಾಸ ತಜ್ಞ ಡಾ.ರಂಗರಾಜು, ಕಲ್ಲಿನಲ್ಲಿರುವ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಪ್ರತಿಮೆಯಲ್ಲಿ ಕಂಡಿದೆ. ನಗರ ಪ್ರಮುಖ ವೃತ್ತ ಇದಾಗಿರೋದ್ರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಇದ್ರಿಂದಾಗಿ ಕಾರ್ಬನ್ ಡೈಆಕ್ಸೈಡ್, ಮಾನಾಕ್ಸೈಡ್ ಇದೇಲ್ಲಾ ಸೇರಿ ಹಾಳಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿಮೆಯಲ್ಲಿ ಕತ್ತಿಗೆ ಬಳಸಿರುವ ಶಿಲೆ ಉತ್ತಮ ಗುಣಮಟ್ಟದ್ದಲ್ಲ. ಈಗಾಗಿ  ಪ್ರತಿಮೆ ಪದೇ ಪದೇ ಅದು ಹಾಳಾಗುತ್ತಿದೆ. ಸದ್ಯ ಪ್ರತಿಮೆಗೆ ಸಣ್ಣ ಪ್ರಮಾಣದ ಬಿರುಕು ಇರುವುದರಿಂದ ಹೆಚ್ಚಿನ ಆತಂಕ ಇಲ್ಲ. ಬೇಸಿಗೆಯಲ್ಲಿ ಇದರ ಬಗ್ಗೆ ಹೆಚ್ಚು ಆತಂಕ ಇಲ್ಲ. ಆದರೆ ಮಳೆಗಾಲಕ್ಕೆ ಹೆಚ್ಚು ತೊಂದರೆ ಆಗುತ್ತೆ. ಹೀಗಾಗಿ ಮಳೆಗಾಲದ ಹೊತ್ತಿಗೆ ಪ್ರತಿಮೆ‌ ಸಂರಕ್ಷಣೆ ಮಾಡಿದರೆ ಒಳಿತು. ಪ್ರತಿಮೆಯನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬೇಕು. ಬಿರುಕಿನ ಜಾಗದಲ್ಲಿ ಅಮೃತಶಿಲೆಯ ಕಲ್ಲಿನ ಪುಡಿಯನ್ನು ಬಳಸಿ ಸರಿ ಪಡಿಸಬೇಕು ಎಂದು   ಪುರಾತತ್ವ ತಜ್ಞ ಫ್ರೊ.ರಂಗರಾಜು ಹೇಳಿದರು.

Key words: mysore- crack -statue – Nalwadi Krishnaraja Wodeyar- history expert- Dr. Rangaraju- Visit