ಮೈಸೂರು ಪಾಲಿಕೆಯಲ್ಲಿ ಹಳೆ ದೋಸ್ತಿ ಮುಂದುವರಿಕೆ: ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಆಯ್ಕೆ…

kannada t-shirts

ಮೈಸೂರು,ಫೆಬ್ರವರಿ,24,2021(www.justkannada.in):  ಬಾರಿ ಕುತೂಹಲ ಕೆರಳಿಸಿದ್ಧ ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಕೊನೆಗೂ ಹಳೇ ದೋಸ್ತಿ ಮುಂದುವರೆದಿದ್ದು ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.jk

ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ 43 ಮತಗಳನ್ನ ಪಡೆಯುವ ಮೂಲಕ 23ನೇ ಅವಧಿಗೆ ಮೈಸೂರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಉಪ ಮೇಯರ್ ಆಗಿ ಕಾಂಗ್ರೆಸ್ ಅಭ್ಯರ್ಥಿ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಈ ಕುರಿತು  ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಪ್ರಕಾಶ್ ಅಧಿಕೃತ ಘೋಷಣೆ ಮಾಡಿದ್ದಾರೆ.Mysore City  corporation-congress-jds –alliance- continue- Rukmini Madhegowda -Mayor

ಬಿಜೆಪಿ ಮೇಯರ್ ಅಭ್ಯರ್ಥಿ ಸುನಂದಾ ಪಾಲನೇತ್ರರಿಗೆ 26, ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ಶಾಂತಕುಮಾರಿ 00 ಮತ ಪಡೆದಿದ್ದಾರೆ. ಈ ಮೂಲಕ ಮೈಸೂರು ಪಾಲಿಕೆ ಗದ್ದುಗೆಗೇರುವ ಆಸೆ ಇಟ್ಟುಕೊಂಡಿದ್ಧ ಬಿಜೆಪಿಗೆ ನಿರಾಸೆಯಾಗಿದೆ.mysore-city-corporation-congress-jds-alliance-continue-rukmini-madhegowda-mayor

ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿ ಅಭ್ಯರ್ಥಿಯನ್ನ ಹಾಕಿತ್ತು. ಮೂರು ಪಕ್ಷಗಳು ಅಭ್ಯರ್ಥಿ ಹಾಕಿದ್ದು ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್-ಜೆಡಿಎಸ್ ಹಳೆ ದೋಸ್ತಿ ಮುಂದುವರೆದಿದ್ದು ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಸ್ಥಳೀಯ ನಾಯಕರು ಸಮ್ಮತಿಸಿದ್ದರು.  ಹೀಗಾಗಿ ಕೊನೆಗೂ ಜೆಡಿಎಸ್ ಮೇಯರ್ ಪಟ್ಟ ಪಡೆದುಕೋಳ್ಳುವಲ್ಲಿ ಯಶಸ್ವಿಯಾಗಿದೆ.

ENGLISH SUMMARY….

Old coalition continues in MCC: Rukmini Madegowda of JDS elected as Mayor
Mysuru, Feb. 24, 2021 (www.justkannada.in): The Mysore City Corporation Mayoral elections which had triggered a lot of curiosity have ended up in the old coalition between JDS and Congress. As a result, JDS candidate Rukmini Madegowda has been elected as the new Mayor of Mysore City.
The JDS candidate who garnered 43 votes has become the new Mayor and Congress candidate Anwar Baig has been elected as the Deputy Mayor. The Election Officer and Regional Commissioner Prakash have officially announced this.mysore-city-corporation-congress-jds-alliance-continue-rukmini-madhegowda-mayor
While BJP Mayoral candidate Sunanda Palanetra obtained 26 votes, Congress candidate H.M. Shantakumari secured zero votes. Thus, the BJP which had eyed getting power in the MCC Mayor elections has tasted failure.
Keywords: MCC Mayoral elections/ Mysore City New mayor/ JDS-Congress coalition continues

Key words: Mysore City  corporation-congress-jds –alliance- continue- Rukmini Madhegowda -Mayor

website developers in mysore