ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಖಂಡನೆ: ಮೈಸೂರಿನಲ್ಲಿ ಸೈಕಲ್ ಜಾಥಾ….

ಮೈಸೂರು,ಫೆಬ್ರವರಿ,24,2021(www.justkannada.in): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮೈಸೂರಿನಲ್ಲಿ ಸೈಕಲ್ ಜಾಥಾ ನಡೆಸಿ ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.jk

ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಸೇರಿದಂತೆ 11 ಸಂಘಟನೆಗಳ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಪ್ರೊ. ಕೆ.ಎಸ್.ಭಗವಾನ್ ನೇತೃತ್ವದಲ್ಲಿ ನಗರದ ಕೋರ್ಟ್ ಮುಂಭಾಗದಿಂದ ಡಿಸಿ ಕಚೇರಿವರೆಗೆ  ಸೈಕಲ್ ಜಾಥಾ ನಡೆಯಿತು.

ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ  ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ. ಜೆ. ವಿಜಯಕುಮಾರ್ ಹಸಿರು ಬಾವುಟ ತೋರಿಸುವ ಮೂಲಕ ಸೈಕಲ್ ಜಾಥಾಗೆ ಚಾಲನೆ ನೀಡಿದರು.ಕೋರ್ಟ್  ನಿಂದ ಡಿಸಿ ಕಚೇರಿವರೆಗೂ ಸೈಕಲ್ ಜಾಥಾ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.Petrol-diesel -condemnation - price hike- Cycle Jatha - Mysore.

ಸೈಕಲ್ ಜಾಥಾದಲ್ಲಿ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್, ಮಾಜಿ ಮೇಯರ್ ಪುರೋಷತ್ತಮ್, ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Key words: Petrol-diesel -condemnation – price hike- Cycle Jatha – Mysore.