ಮೈಸೂರಿನ ಕೇಂದ್ರ ಕಾರಾಗೃಹಕ್ಕೂ ವಕ್ಕರಿಸಿದ ಕೊರೋನಾ ಮಹಾಮಾರಿ…

Promotion

ಮೈಸೂರು,ಜು,4,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಕೋವಿಡ್ ರುದ್ರನರ್ತನ ಹೆಚ್ಚಾಗಿದ್ದು ಈ ಮಧ್ಯೆ ಕೇಂದ್ರ ಕಾರಗೃಹಕ್ಕೂ ಮಹಾಮಾರಿ ವಕ್ಕರಿಸಿದೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಕೊರೋನಾ ಸೋಂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ವಿಚಾರಣಾಧೀನ ಖೈದಿಮೈಸೂರಿನ ವಿಜಯನಗರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಜೈಲು ಸೇರಿದ್ದಾನೆ. ಈತ ಕೊಲೆ‌ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದನು. ನಂತರ  ವಿಜಯನಗರ ಪೊಲೀಸರಿಗೆ ಆರೋಪಿ ಶರಣಾಗಿದ್ದನು.mysore-central-jail-corona-virus-accused

ಬಳಿಕ ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ನಂತರ ಮೂರು ದಿನಗಳ ಹಿಂದೆ ಆರೋಪಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು.ಪರೀಕ್ಷೆಯಲ್ಲಿ  ಆರೋಪಿಗೆ ಕೊರೊನಾ ಇರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಆತನ ಜೊತೆಗಿದ್ದ 20 ಖೈದಿಗಳ ಜೈಲಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎನ್ನಲಾಗಿದೆ.

Key words: mysore- central jail-corona virus- Accused