ಮೈಸೂರಿನಲ್ಲಿ ಕೊರೋನಾ ಹಾವಳಿ: ಚೆಲುವಾಂಬ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಪಾಸಿಟಿವ್ ದೃಢ…

ಮೈಸೂರು,ಜು,4,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಹಾವಳಿ ಮುಂದುವರಿದಿದ್ದು ಈ ನಡುವೆ ಚೆಲುವಾಂಬ ಆಸ್ಪತ್ರೆಗೂ ಕೊರೋನಾ ವೈರಸ್ ವಕ್ಕರಿಸಿದೆ.

ಚೆಲುವಾಂಬ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ನಿನ್ನೆ ಸಂಜೆ ಬಂದ ವರದಿಯಲ್ಲಿ ಗರ್ಭಿಣಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ  ಹೀಗಾಗಿ ಚೆಲುವಾಂಬದಲ್ಲಿ ದಾಖಲಾಗಿದ್ದ ಗರ್ಭಿಣಿಯರನ್ನು ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಮಧ್ಯರಾತ್ರಿಯಿಂದಲೇ ಸ್ಥಳಾಂತರ ಪ್ರಕ್ರಿಯೆ ಶುರುವಾಗಿದೆ.Coronavirus – Mysore-Positive - pregnant woman - Cheluwamba hospital.

ಚೆಲುವಾಂಬ ಆಸ್ಪತ್ರೆಯ ಬಹುತೇಕ ವಾರ್ಡ್ ಗಳನ್ನ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.  ಮೈಸೂರಿನಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು ನಿನ್ನೆ ಒಂದೇ ದಿನ 35 ಕೊರೋನಾ ಪ್ರಕರಣಗಳು ಕಂಡು ಬಂದಿದ್ದವು.

Key words: Coronavirus – Mysore-Positive – pregnant woman – Cheluwamba hospital.