ಕೋವಿಡ್ 19 ಎಫೆಕ್ಟ್: ಹೀರೋ ಇಂಡಿಯನ್‌ ಓಪನ್‌ ಗಾಲ್ಫ್ ಪಂದ್ಯಾವಳಿ ರದ್ದು

ಮುಂಬೈ, ಜುಲೈ 04, 2020 (www.justkannada.in): 2020ರ ಹೀರೋ ಇಂಡಿಯನ್‌ ಓಪನ್‌ ಪುರುಷರ ಗಾಲ್ಫ್ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಲ್ಲಿ ಈ ವರ್ಷದ ಕೂಟವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಇಂಡಿಯನ್‌ ಗಾಲ್ಫ್ ಯೂನಿಯನ್‌ ಅಧ್ಯಕ್ಷ ದೇವಾಂಗ್‌ ಶಾ, ಈ ಪಂದ್ಯಾವಳಿ ಮಾರ್ಚ್‌ 19ರಿಂದ 22ರ ತನಕ ಗುರ್ಗಾಂವ್‌ನಲ್ಲಿ ನಡೆಯಬೇಕಿತ್ತು. ಆಗ ಕೊರೊನಾ ಹೆಚ್ಚಲಾರಂಭಿಸಿದ ಕಾರಣ ಕೂಟವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.