ದಿನೇಶ್ ಗುಂಡೂರಾವ್ ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು: ಕುಟುಂಬಸ್ಥರೆಲ್ಲರೂ ಕ್ವಾರಂಟೈನ್…

ಬೆಂಗಳೂರು,ಜು,4,2020(www.justkannada.in): ರಾಜ್ಯದಲ್ಲಿ  ಕೊರೋನಾ ಸೋಂಕು ದಿನೇ ದಿನೇ ತಲ್ಲಣ ಸೃಷ್ಟಿಸಿದ್ದು, ಪೊಲೀಸರು, ರಾಜಕಾರಣಿಗಳೂ, ಕೊರೋನಾ ವಾರಿಯರ್ಸ್ ಸೇರಿ ಯಾರನ್ನೂ ಬಿಟ್ಟು ಬಿಡದೇ ಕಾಡುತ್ತಿದೆ.

ಈ ನಡುವೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.ಕಳೆದೆರಡು ದಿನಗಳ ಹಿಂದೆ ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು.congress-leader-dinesh-gundurao-security-guard-corona-positive

ನಿನ್ನೆ ಇವರ ವರದಿ ಬಂದಿದ್ದು, ಭದ್ರತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಕುಟುಂಬ ಸದಸ್ಯರನ್ನು ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ನಮ್ಮ ಒಬ್ಬರು ಪೊಲೀಸ್ ಸೆಕ್ಯೂರಿಟಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ  ತಮ್ಮ ಕುಟುಂಬದವರು ಕ್ವಾರಂಟೈನ್ ನಲ್ಲಿದ್ದು, ಸದ್ಯ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ.

Key words: congress leader -Dinesh Gundurao- security guard-corona positive