ಆರು ತಿಂಗಳ ಬಳಿಕ ಹುಟ್ಟೂರಿಗೆ ಬಂದ ಶವ….

ಮೈಸೂರು,ಜು,8,2020(www.justkannada.in):ಕೆಲಸಕ್ಕಾಗಿ ಮಲೇಷಿಯಾಗೆ ತೆರಳಿ ಅಲ್ಲೇ ಮೃತಪಟ್ಟಿದ್ದ ಯುವಕನ ಶವ ತವರಿಗೆ ಬಂದಿದ್ದು ಬರೋಬ್ಬರಿ ಆರು ತಿಂಗಳ ನಂತರ.  ಹೌದು, ಯುವಕ ಸಾವನ್ನಪ್ಪಿದ್ದು ಡಿಸೆಂಬರ್ ನಲ್ಲಿ ಆದರೇ ಶವ ಬಂದಿದ್ದು ಮಾತ್ರ ಈಗ. ಇದಕ್ಕೆ ಕಾರಣ ಕೊರೋನಾ ಲಾಕ್ ಡೌನ್ ಎಫೆಕ್ಟ್….jk-logo-justkannada-logo

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ನಿವಾಸಿ ಸುಮಂತ್(22) ಡಿಸೆಂಬರ್ ತಿಂಗಳಲ್ಲಿ ಮಲೇಷಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈ ನಡುವೆ ಮಧ್ಯವರ್ತಿಯೊಬ್ಬ 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ  ಸುಮಂತ್ ನನ್ನ ಮಲೇಷಿಯಾಗೆ ಕರೆದೊಯ್ದಿದ್ದನು. ಆದರೆ ಸುಮಂತ್  ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ಸುಮಂತ್ ಗೆ ಮಧ್ಯವರ್ತಿ ವಂಚನೆ ಮಾಡಿದ್ದನು.

ಇದರಿಂದ ಮನನೊಂದಿದ್ದ ಯುವಕ ಸುಮಂತ್ ಮಲೇಷಿಯಾದಿಂದ ವಾಪಸ್ ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದನು. ಆದರೆ ಅಷ್ಟರಲ್ಲೇ ಸುಮಂತ್ ಮೃತಪಟ್ಟಿರುವುದಾಗಿ ಸಹೋದ್ಯೋಗಿಗಳು ಸುಮಂತ್ ಪೋಷಕರಿಗೆ ತಿಳಿಸಿದ್ದರು. ನಂತರ ಸುಮಂತ್ ಪೋಷಕರು, ಸಾವಿನ ತನಿಖೆ, ಶವ ತರಿಸಿಕೊಳ್ಳಲು ಭಾರತದ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದರು.mysore- boy-death- Malaysia-corpse -came - six months- later.

ಆದರೆ ವಿಶ್ವದೆಲ್ಲೆಡೆ ಕೊರೋನಾ ಅರ್ಭಟ ಹೆಚ್ಚಾಗಿ ಭಾರತದಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ  ಸುಮಂತ್ ಮೃತದೇಹ ಆರು‌ ತಿಂಗಳ ಬಳಿಕ ತಡವಾಗಿ ಹುಟ್ಟೂರಿಗೆ ಆಗಮಿಸಿದ್ದು, ಸುಮಂತ್ ತಾಯಿ ಕೊನೆಗೂ ತನ್ನ ಮಗನ ಅಂತ್ಯಕ್ರಿಯೆ ನೆರವೇರಿಸಿ ಸಮಾಧಾನಪಟ್ಟಿದ್ದಾರೆ.

Key words: mysore- boy-death- Malaysia-corpse -came – six months- later.