ಮೈಸೂರಿನ ‘ಐಶ್(AIISH)’ ನಲ್ಲಿ ಸೆ.20 ರಂದು ‘ಮುಕ್ತ ದಿನ’ ಕಾರ್ಯಕ್ರಮ….

ಮೈಸೂರು,ಸೆ,18,2019(www.justkannada.in):  ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಇದೇ ಸೆಪ್ಟಂಬರ್ 20 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ವರೆಗೆ “ಮುಕ್ತ ದಿನ” ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ದಿನದಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮಾತು, ಧ್ವನಿ, ಶ್ರವಣ ತಾಂತ್ರಿಕತೆ, ಶ್ರವಣ ದೋಷಗಳು, ಮಾತಿನ ಆರೋಗ್ಯ ಮತ್ತು ವಾಕ್ ಶ್ರವಣಕ್ಕೆ ಸಂಬಂದಿಸಿದ ಇತರೆ ವಿಚಾರಗಳನ್ನು ಸಾರ್ವಜನಿಕರು ತಿಳಿಯಬಹುದಾಗಿದ್ದು, ಇಲ್ಲಿನ ವಿವಿಧ ರೀತಿಯ ಶೈಕ್ಷಣಿಕ ಕೋರ್ಸ್ ಗಳ ಬಗ್ಗೆಯು ಹಾಗೂ ಉದ್ಯೋಗವಕಾಶಗಳ ಬಗ್ಗೆ ತಿಳಿಸಿಕೊಡಲಾಗುವುದು.

ಶಾಲಾ -ಕಾಲೇಜು ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳನ್ನು ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯನ್ನು ಖುದ್ದಾಗಿ ಇಲ್ಲವೇ ದೂರವಾಣಿ:. ಉಚಿತ ಕರೆಗಳಿಗೆ: 1800 4255 218 ಮೊಬೈಲ್:  9342632842 / 9738582506 ಮೂಲಕ ಸಂಪರ್ಕಿಸಬಹುದು.

Key words: Mysore-AIISH- Open day -program – 20th September