ನನ್ನ ಸ್ನೇಹಿತ ನನ್ನನ್ನು ಅಗಲಿ ಹೋಗಿದ್ದಾನೆ, ‘’ಇದು ರಾಜಕಾರಣದ ಕೊಲೆ’’ : ಎಚ್.ಡಿ.ಕುಮಾರಸ್ವಾಮಿ ಭಾವುಕ…!

Promotion

ಬೆಂಗಳೂರು,ಡಿಸೆಂಬರ್,29,2020(www.justkannada.in) : ನನ್ನ ಸ್ನೇಹಿತ ಇಂದು ನನ್ನನ್ನು ಅಗಲಿ ಹೋಗಿದ್ದಾನೆ. ಇದು ರಾಜಕಾರಣದ ಕೊಲೆ ಎಂದು ಹೇಳುವೆ ಎಂದು ಧರ್ಮೇಗೌಡರೊಂದಿಗೆ ಆತ್ಮೀಯ ಭಾಂದವ್ಯ ಹೊಂದಿದ್ದ ಎಚ್.ಡಿ.ಕುಮಾರಸ್ವಾಮಿ ಸ್ನೇಹಿತನ ಸಾವಿಗೆ ಕಣ್ಣೀರು ಹಾಕಿದ್ದಾರೆ.

ರೈಲ್ವೆ ಹಳಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾನಾಡಿರುವ ಎಚ್.ಡಿ.ಕುಮಾರಸ್ವಾಮಿ, ಇಂತಹ ಘಟನೆ ಸಹಿಸುವುದಕ್ಕೆ ಆಗುವುದಿಲ್ಲ. ಧರ್ಮೇಗೌಡ ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು.  ಧರ್ಮೇಗೌಡ ತಂದೆ ಲಕ್ಷಯ್ಯ ಒಂದು ಮಾತು ನನಗೆ ಹೇಳಿದ್ದರು. ನಾನಂತೂ ಮಂತ್ರಿ ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ(ಧರ್ಮೇಗೌಡ) ಮಂತ್ರಿ ಆಗವಬೇಕೆಂದಿದ್ದರು. ಆದರೆ, ಅವರ ಆಸೆ ಈಡೇರಿಸಲು ಆಗಲಿಲ್ಲ ಎಂದು ವಿಷಾದವ್ಯಕ್ತಪಡಿಸಿದರು.

My,friend,left me,political,killing,H.D.Kumaraswamy,feels .

ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಗೆ ಹೋಗಲು ನಿರ್ಧರಿಸಿದ್ದರು. ಆ ವೇಳೆ  ಎಚ್.ಡಿ.ಕೆ ಬೇಕಾ, ಎಂಎಲ್ ಎ ಸ್ಥಾನ ಬೇಕಾ ಎಂದು ನಾನು ಕೇಳಿದ್ದೆ. ಈ ಮಾತಿಗೆ ಅವರು ತನ್ನ  ನಿರ್ಧಾರವನ್ನು ಬದಲಿಸಿದ್ದರು ಎಂದು ಅಂದಿನ ಘಟನೆ ಮೆಲುಕು ಹಾಕಿ ಎಚ್.ಡಿ.ಕೆ ಭಾವುಕರಾಗಿದ್ದಾರೆ.

key words : My-friend-left me-political-killing-H.D.Kumaraswamy-feels …!