ಕೆಟ್ಟು ನಿಂತ ಅಂಬ್ಯುಲೆನ್ಸ್: ಹಾರಿ ಹೋಯ್ತು ವೃದ್ಧೆಯ ಪ್ರಾಣ…

ಮೈಸೂರು,ಡಿಸೆಂಬರ್,29,2020(www.justkannada.in):  ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಆಸ್ಪತ್ರೆಗೆ ಕರೆದೊಯ್ಯುವುದು ತಡವಾದ ಹಿನ್ನೆಲೆ ವೃದ್ಧೆ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೋರಮ್ಮ (55) ಮೃತಪಟ್ಟವರು. ಬೋರಮ್ಮ ಲೊ ಬಿಪಿಯಾಗಿ ಕುಸಿದು ಬಿದ್ದಿದ್ದು, ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದರು.

ವೃದ್ದೆ ಕರೆದೊಯ್ಯಲು ಸ್ಥಳಕ್ಕಾಗಮಿಸಿದ್ದ  108 ಆಂಬುಲೆನ್ಸ್ ಅಲ್ಲೇ ಕೆಟ್ಟು ನಿಂತಿದೆ. ಈ ವೇಳೆ ಆಂಬುಲೆನ್ಸ್ ಕೆಟ್ಟು ನಿಂತಿದ್ದರಿಂದ ವೃದ್ದೆಯನ್ನು ಖಾಸಗಿ ವಾಹನದಲ್ಲಿ ಕರೆದೊಯ್ಯುಲು  ಕುಟುಂಬಸ್ಥರು ಮುಂದಾಗಿದ್ದಾರೆ. ಆದರೆ ತಡವಾಗಿ ಆಸ್ಪತ್ರೆಗೆ ಕರೆದೊಯ್ದ ಪರಿಣಾಮ ವೃದ್ಧೆ ಮಂಡ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.Ambulance - T. Narasipura - Mysore – women-died - delayed - Hospital

ಈ ಮೂಲಕ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ವೃದ್ಧೆಯ ಪ್ರಾಣ ಬಲಿಯಾಗಿದ್ದು, ಕೆಟ್ಟು ನಿಂತ ಅಂಬುಲೆನ್ಸ್ ಚಾಲಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Key words: Ambulance – T. Narasipura – Mysore – women-died – delayed – Hospital