ಆರ್.ರೇಖಾ ಕದಿರೇಶ್ ಹತ್ಯೆ ಪ್ರಕರಣ: ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Promotion

ಬೆಂಗಳೂರು, ಜೂನ್ 26, 2021 (www.justkannada.in): ಮಾಜಿ‌ ಕಾರ್ಪೋರೇಟರ್ ಆರ್.ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಪೀಟರ್ (46) ಹಾಗೂ ಸೂರ್ಯನನ್ನು (19) ಪೊಲೀಸರು ಗುಂಡು ಹಾರಿಸಿ ಶುಕ್ರವಾರ ಸೆರೆ ಹಿಡಿದಿದ್ದರು.
ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಸ್ಪೀಫನ್ (21), ಅಜಯ್ (21) ಹಾಗೂ ಪುರುಷೋತ್ತಮ್‌ನನ್ನು (22) ಬಂಧಿಸಿದ್ದಾರೆ.

‘ಆರೋಪಿ ಪೀಟರ್ ಹಾಗೂ ಸೂರ್ಯ, ರೇಖಾ‌ ಅವರಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಚಾಕುವಿನಿಂದ ಕತ್ತು ಕೊಯ್ದಿದ್ದರು.