ಎಂಟಿಬಿ ನಾಗರಾಜ್ , ಹೆಚ್. ವಿಶ್ವನಾಥ್, ಆರ್. ಶಂಕರ್ ಗೂ ಸಚಿವ ಸ್ಥಾನ ಸಿಗುತ್ತೆ- ಶಾಸಕ ಭೈರತಿ ಬಸವರಾಜ್…

Promotion

ಬೆಂಗಳೂರು,ಫೆ,3,2020(www.justkannada.in): 10 ಪ್ಲಸ್ ಮೂರು ಮಾತ್ರವಲ್ಲದೆ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಶಾಸಕ ಭೈರತಿ ಬಸವರಾಜು ತಿಳಿಸಿದರು.

ಫೆಬ್ರವರಿ 6 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಭೇಟಿಯಾದ ಅವರು ಸಮಾಲೋಚನೆ ನಡೆಸಿದ್ದಾರೆ.

ಬಳಿಕ ಮಾಧ್ಯಮದ ಜತೆ ಇಂದು ಮಾತನಾಡಿದ ಶಾಸಕ ಭೈರತಿ ಬಸವರಾಜು, ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ.  10+3 ಮಾತ್ರವಲ್ಲ ಎಲ್ಲರಿಗೂ ನ್ಯಾಯ ಸಿಗುತ್ತೆ. ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ , ಮಹೇಶ್ ಕುಮುಟಳ್ಳಿ,  ಶಂಕರ್  ಗೂ ಸ್ಥಾನ ಸಿಗುತ್ತೆ.  7 ರಿಂದ 8 ಪರಿಷತ್ ಖಾಲಿಯಾದಾಗ ಸಚಿವ ಸ್ಥಾನ ನೀಡುತ್ತಾರೆ ಎಂದರು.

Key words: MTB Nagaraj,-h.Vishwanath- R. Shankar – ministerial position-MLA- Bhairati Basavaraj.