ನನಗೆ ಹಾಗೂ ಹೆಚ್.ವಿಶ್ವನಾಥ್ ಗೆ ಮೇ ಅಥವಾ ಜೂನ್ ತಿಂಗಳಲ್ಲಿ ಸಚಿವ ಸ್ಥಾನದ ಭರವಸೆ- ಎಂಟಿಬಿ ನಾಗರಾಜ್ ಹೇಳಿಕೆ…

ಬೆಂಗಳೂರು,ಫೆ,3,2020(www.justkannada.in):  ನನಗೂ ಹಾಗೂ ಹೆಚ್.ವಿಶ್ವನಾಥ್ ಮೇ ಅಥವಾ ಜೂನ್ ತಿಂಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆಯನ್ನ ಸಿಎಂ ಬಿಎಸ್ ವೈ ನೀಡಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಹೊಸಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಂಟಿಬಿ ನಾಗರಾಜ್, ನಾನು ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿ 35 ನಿಮಿಷಗಳ ಕಾಲ ಚರ್ಚಿಸಿದ್ದೇನೆ. ಮೇ ಅಥವಾ ಜೂನ್ ತಿಂಗಳಲ್ಲಿ 7 ಎಂಎಲ್ ಸಿ ಸ್ಥಾನ ಖಾಲಿಯಾಗಲಿವೆ. ಹೀಗಾಗಿ ಅಂದು ನನಗೆ ಹಾಗೂ ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಈಗ 10 ನೂತನ ಶಾಸಕರು ಮೂರು ಮೂಲ ಬಿಜೆಪಿ ಶಾಸಕರಿಗೆ ಸ್ಥಾನ ಸಿಗಲಿದೆ ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು.  ಅವರು ಹೇಳಿದ ಮಾತನ್ನ ಚಾಚೂ ತಪ್ಪದೆ ಪಾಲಿಸುತ್ತಾರೆ.  ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

Key words: Promise – ministerial position – – H. Vishwanath -May or June-MTB Nagaraj