ಪುತ್ರಿಯನ್ನ ಕೊಂದು ತಾಯಿ ಆತ್ಮಹತ್ಯೆಗೆ ಶರಣು.

Promotion

ಬೆಂಗಳೂರು,ಜುಲೈ,1,2022(www.justkannada.in):  ಆರೋಗ್ಯ ಸಮಸ್ಯೆಯಿಂದ ನೊಂದ ತಾಯಿ ತನ್ನ ಮೂರು ವರ್ಷದ ಮಗುವನ್ನ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಆರ್ ಆರ್ ನಗರದ ಚನ್ನಸಂದ್ರದಲ್ಲಿ ಈ ಘಟನೆ ನಡೆದಿದೆ. ತಾಯಿ ದೀಪಾ(31), ಪುತ್ರಿ ದಿಯಾ(3) ಮೃತಪಟ್ಟವರು. ದೀಪಾ 2017ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರ್ಶ್ ಎಂಬುವವರನ್ನ ವಿವಾಹವಾಗಿದ್ದರು. ಇಬ್ಬರು ಉಡುಪಿಯ ಬ್ರಹ್ಮಾವರ ಮೂಲದವರಾಗಿದ್ದು, ಆರ್.ಆರ್ ನಗರದ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.

ಈ ನಡುವೆ ದೀಪಾ ಒಂದು ವಾರದಿಂದ ಜ್ವರ ಹೊಟ್ಟೇನೋವಿನಿಂದ ಬಳಲುತ್ತಿದ್ದು ಇದರಿಂದ ಬೇಸತ್ತಾ ದೀಪಾ ಡೆತ್ ನೋಟ್ ಬರೆದಿಟ್ಟು ಮೂರು ವರ್ಷದ ಪುತ್ರಿ ರಿಯಾಳನ್ನ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಯಾರೂ ಹೊಣೆಯಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.

Key words: Mother -committed –suicide- killing – daughter.