ನಮಗೆ ಯಾವತ್ತಿಗೂ ಜನರೇ ಮೊದಲು: ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ನಿರ್ಧಾರಕ್ಕೆ ಮೋದಿ ಪ್ರತಿಕ್ರಿಯೆ

kannada t-shirts

ಬೆಂಗಳೂರು, ಮೇ 22, 2022 (www.justkannada.in): ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ನಿರ್ಧಾರಕ್ಕೆ ಸಂಬಂಧಿಸಿದಂಎ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ಯಾವತ್ತಿಗೂ ಜನರೇ ಮೊದಲು! ಇಂದಿನ ನಿರ್ಧಾರಗಳು, ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯು ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮೋದಿ ತಿಳಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ನಾಗರಿಕರಿಗೆ ರಿಲೀಫ್ ದೊರೆಯಲಿದ್ದು, ಜೀವನ ನಿರ್ವಹಣೆ ಸುಗಮವಾಗಲಿದೆ’ ಎಂದು ಹೇಳಿದ್ದಾರೆ.

ಉಜ್ವಲ ಯೋಜನೆಯಿಂದ ಕೋಟ್ಯಂತರ ಭಾರತೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ನೆರವಾಗಿದೆ. ಉಜ್ವಲ ಯೋಜನೆಗೆ ಸಬ್ಸಿಡಿ ನೀಡುವ ಇಂದಿನ ನಿರ್ಧಾರವು ಕುಟುಂಬಗಳಿಗೆ ನೆರವಾಗಲಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.

website developers in mysore