ಚಿನ್ನಾಭರಣ ಪ್ರಿಯರಿಗೆ ಶಾಖ್ ! ಚಿನ್ನದ ದರದಲ್ಲಿ ಏರಿಕೆ

ಬೆಂಗಳೂರು, ಮೇ 22, 2022 (www.justkannada.in): ಆಭರಣ ಪ್ರಿಯರಿಗೆ ಬೆಲೆ ಏರಿಕೆ ತಟ್ಟಿದೆ.. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ ಆರ್ಥಿಕ ಬಿಕ್ಕಟ್ಟು ಚಿನ್ನದ ಬೆಲೆಯನ್ನು ಗಗನಕ್ಕೆ ಕೊಂಡೊಯುತ್ತಿವೆ.

ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ. ಹೀಗಾಗಿ ಇಂದು ಚಿನ್ನದ ದರಲ್ಲಿ ಏರಿಕೆಯಾಗಿದೆ.

ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,133 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,133 ರೂಪಾಯಿ ನಿಗದಿಯಾಗಿದೆ.

ಇನ್ನು ಬೆಳ್ಳಿ ಬೆಲೆಯಲ್ಲೂ (Silver Price) ಏರಿಕೆಯಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 61,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಇದೆ.