ಆರ್’ಸಿಬಿಗೆ ಲಕ್ ! ಐಪಿಎಲ್ 2022 ಫ್ಲೇ ಆಫ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ರೆಡಿ

ಬೆಂಗಳೂರು, ಮೇ 22, 2022 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್‌ ರೇಸ್‌ನಿಂದ ಇದೀಗ ಹೊರಬಿದ್ದಿದೆ.

ಶನಿವಾರ ನಡೆದ ಐಪಿಎಲ್ 2022ರ 15ನೇ ಋತುವಿನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುತ್ತಿದ್ದಂತೆ, ಪ್ಲೇ-ಆಫ್ ಕನಸು ಡೆಲ್ಲಿ ತಂಡಕ್ಕೆ ಮರೀಚಿಕೆಯಾಯಿತು.

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನ ಗುಜರಾತ್ ಟೈಟಾನ್ಸ್ (ಜಿಟಿ) ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ ಮತ್ತು ಪ್ಲೇಆಫ್ ಪಂದ್ಯಗಳಿಗೆ ಹೋಗುವ ಟೇಬಲ್‌ ಟಾಪರ್ ಆಗಿ ಅವರ ಚೊಚ್ಚಲ ಋತುವನ್ನು ಪೂರ್ಣಗೊಳಿಸಿದರು.

ಮೇ 25ರಂದು ಲಕ್ನೋ ವಿರುದ್ಧ ಆರ್‌ಸಿಬಿ ಸೆಣಸಾಟ, ಮೇ 24, ಮಂಗಳವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ.

ಇನ್ನು ಮೇ 25ರಂದು ಇದೇ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲಿಮಿನೇಟರ್ ಪಂದ್ಯವಾಡಲಿದೆ. ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೈನಲ್

ನಂತರ ಕ್ವಾಲಿಫೈಯರ್ 1ರಲ್ಲಿ ಸೋತವರು ಎಲಿಮಿನೇಟರ್ ವಿಜೇತರನ್ನು ಎದುರಿಸುವ ಕ್ವಾಲಿಫೈಯರ್ 2 ಪಂದ್ಯ ಮೇ 27ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.