ದೇಶದಲ್ಲಿ 2,226 ಹೊಸ ಕೋವಿಡ್ ಪ್ರಕರಣ: ಕರಗುತ್ತಿದೆ 4ನೇ ಅಲೆ ಆತಂಕ

ಬೆಂಗಳೂರು, ಮೇ 22, 2022 (www.justkannada.in): ಭಾರತ ಹೊಸದಾಗಿ 2,226 ಕೋವಿಡ್‌ ಪ್ರಕರಣಗಳನ್ನು ಕಂಡಿದೆ. ಈ ಮೂಲಕ ನಾಲ್ಕನೇ ಅಲೆ ಕಾರ್ಮೋಡ ನಿಧಾನವಾಗಿ ಸರಿಯುತ್ತಿದೆ.

24 ಗಂಟೆಗಳ ಅವಧಿಯಲ್ಲಿ2,226 ಕೋವಿಡ್‌ ಪ್ರಕರಣ ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,31,36,371ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,955ಕ್ಕೆ ಇಳಿದಿದೆ.

ಈ ಒಂದು ದಿನದ ಅವಧಿಯಲ್ಲಿ 65 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 5,24,413ಕ್ಕೆ ಏರಿಕೆಯಾಗಿದೆ. ದೇಶದ ದೈನಂದಿನ ಪಾಸಿಟಿವಿಟಿ ದರ ಶೇ 0.50 ರಷ್ಟು ಇದೆ. ದೇಶದಲ್ಲಿ ಈ ವರೆಗೆ 192 ಕೋಟಿ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ.