ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕಬೇಕಾ..? ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ.

Promotion

 ಹುಬ್ಬಳ್ಳಿ,ಏಪ್ರಿಲ್,26,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಪ್ರಚಾರಕ್ಕೆ ಧುಮುಕಿರುವ ಮೂರು ಪಕ್ಷಗಳ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ವಾಕ್ಸರ ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರಿಗೆ ರಾಜ್ಯವಾಳಲು ಆಗಲ್ಲ. ಯಾಕೆ ಇಷ್ಟೋಂದು ಅಬ್ಬರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಗೊತ್ತಿಲ್ಲ. ನನ್ನ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ರಾಜ್ಯ ಚುನಾವಣೆಯಲ್ಲಿ ಮೋದಿ ಮುಖನೋಡಿ ಮತಹಾಕಬೇಕಾ..? ಎಂದು ಕಿಡಿಕಾರಿದರು.

ಸಿಎಂ ಕೂಡ ಮೋದಿ ಶಾ ಮುಖ ನೋಡಿ ಮತ ಹಾಕಿ ಅಂತಾರೆ. ಬಿಜೆಪಿಯವರಿಗೆ ಪ್ರಚೋದನೆ ಮಾಡುವುದೇ ಕೆಲಸ. ಸಣ್ಣ ಕಾರಣಕ್ಕೆ ರಾಹುಲ್ ಗಾಂಧಿ ಅವರನ್ನ ಸಂಸದ ಸ್ಥಾನದಿಂದ ವಜಾ ಮಾಡಿದರು ಎಂದು ಮಲ್ಲಿಕಾರ್ಜುನ ಖರ್ಗೆ  ಹರಿಹಾಯ್ದರು.

Key words: Modi- face – vote – election- Mallikarjuna Kharge