ಕಾಂಗ್ರೆಸ್,ಜೆಡಿಎಸ್ ಎರಡೂ ಪಕ್ಷಗಳು ಯಾವುದೇ ಅಭಿವೃದ್ದಿ ಮಾಡಲ್ಲ: ಸಮಾಜ ವಿಭಜಿಸುವಲ್ಲಿ ನಿಸ್ಸಿಮರು- ಯುಪಿ ಸಿಎಂ ಯೋಗಿ ಆದಿತ್ಯನಾಥ್.

ವಿಜಯಪುರ,ಏಪ್ರಿಲ್,26,2023(www.justkannada.in):  ಕರ್ನಾಟಕದಲ್ಲಿ ಕಾಂಗ್ರೆಸ್,ಜೆಡಿಎಸ್ ಎರಡೂ ಪಕ್ಷಗಳು ಯಾವುದೇ ಅಭಿವೃದ್ದಿ ಮಾಡಲ್ಲ. ಸಮಾಜವನ್ನ ವಿಭಜಿಸುವಲ್ಲಿ ಎರಡು ಪಕ್ಷಗಳು ನಿಸ್ಸಿಮರು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗುಡುಗಿದರು.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್,  ಕಾಂಗ್ರೆಸ್ ಜೆಡಿಎಸ್  ಎರಡು ಪಕ್ಷಗಳಿಗೆ ಯಾವುದೇ ದೂರದೃಷ್ಠೀ ಇಲ್ಲ. ದೇಶದಲ್ಲಿ 60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರಸ್ ಏನು ಮಾಡಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರ ಕೊರೊನಾ ವೇಳೆ ಸಂಕಷ್ಟದಲ್ಲಿದ್ದ ಜನರಿಗೆ ಫ್ರಿ ರೇಷನ್ ಹಾಗೂ ದೇಶದ ಎಲ್ಲರಿಗೂ ಫ್ರಿ ವ್ಯಾಕ್ಸಿನ್ ನೀಡಿದೆ ಎಂದರು.

ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ. ಭಾರತ ಪ್ರಜಾಪ್ರಭುತ್ವದ ತಾಯಿ. ಡಬಲ್​ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗ್ತಿದೆ. 1000 ವರ್ಷಗಳ ಹಿಂದಿನಿಂದ ಕರ್ನಾಟಕ-ಯುಪಿ ನಡುವೆ ಬಾಂಧವ್ಯವಿದೆ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ. ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಪ್ರತಿ ನಾಗರಿಕನ ಸಶಕ್ತಿಕರಣಗೊಳಿಸುವುದು ನಮ್ಮ ಉದ್ದೇಶ. ದೇಶದ ಸಂತರು, ಸಾಧುಗಳ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಭಾರತ ಅಭಿವೃದ್ಧಿ ಆಗುತ್ತಿದೆ. ಭಾರತ ವಿಶ್ವದ ಶಕ್ತಿಯುತವಾದ ರಾಷ್ಟ್ರವಾಗಿದೆ. ವಿಶ್ವದ ಪ್ರಬಲ ಜಿ-20 ರಾಷ್ಟ್ರಗಳ ನೇತೃತ್ವವನ್ನು ಭಾರತ ವಹಿಸುತ್ತಿದೆ. ಕರ್ನಾಟಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು  ಯೋಗಿ ಆದಿತ್ಯನಾಥ್ ಹೊಗಳಿದರು.

Key words: Congress – JDS-dividing -society – UP CM- Yogi Adityanath.