ಎಂಎಲ್‌ ಸಿ ಚುನಾವಣೆಯಲ್ಲಿ ಅನೇಕರು 20ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರಂತೆ.

ಬೆಂಗಳೂರು, ಡಿಸೆಂಬರ್ 20, 2021 (www.justkannada.in): ಈಗಷ್ಟೇ ವಿಧಾನ ಪರಿಷತ್ ಚುನಾವಣೆ ಮುಗಿದಿದೆ. ಈ ಚುನಾವಣೆಯಲ್ಲಿ ಶೂನ್ಯ ಮತಗಳನ್ನು ಪಡೆದಿರುವ ಅನೇಕ ಅಭ್ಯರ್ಥಿಗಳಿದ್ದಾರೆ. ಇದರಿಂದಾಗಿ ಕೇವಲ ಹಣ ಇರುವವರಷ್ಟೇ ಸ್ಪರ್ಧಿಸಬಹುದು ಎಂಬಂತಿಲ್ಲ, ಶೂನ್ಯ ಮತಗಳನ್ನು ಪಡೆಯುವ ಸಾಧ್ಯತೆ ಇರುವವರೂ ಸಹ ತಮ್ಮ ಅದೃಷ್ಟವನ್ನು ಪ್ರಯತ್ನಿಸಬಹುದು ಎಂಬುದನ್ನು ಈ ಚುನಾವಣೆ ತೋರಿಸಿಕೊಂಟ್ಟಂತಿದೆ.

ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದ್ದಂತಹ ಒಟ್ಟು ೪೨ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಕೇವಲ ಒಬ್ಬರು ಮಾತ್ರ ಮತಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ. ವಿಧಾನ ಪರಿಷತ್‌ ನ ೨೦ ಕ್ಷೇತ್ರಗಳಲ್ಲಿರುವ ೨೫ ಸ್ಥಾನಗಳಿಗೆ ಒಟ್ಟು ೯೦ ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರಿಶೀಲಿಸಿದರು. ಅವರ ಪೈಕಿ ಶೇ.೪೬ರಷ್ಟು ಅಭ್ಯರ್ಥಿಗಳಿಗೆ ೨೦ ಮತಗಳೂ ಸಹ ಲಭಿಸಿಲ್ಲ. ಒಟ್ಟು ೩೯ ಅಭ್ಯರ್ಥಿಗಳು ೦, ೧, ೨, ೩, ೪, ೫, ೭, ೯, ೧೦, ೧೬, ೧೭ ಹಾಗೂ ೧೮ ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ. ಮೂವರಿಗೆ ೨೪, ೫೦ ಹಾಗೂ ೫೪ ಮತಗಳು ಲಭಿಸಿವೆ. ಒಟ್ಟು ೯೦ ಅಭ್ಯರ್ಥಿಗಳಿಂದ ಒಟ್ಟು ೯೮,೮೪೬ ಊರ್ಜಿತ ಮತಗಳು ಬಂದಿವೆ.

ಈ ಪೈಕಿ ೪೨ ಅಭ್ಯರ್ಥಿಗಳು ಒಟ್ಟಾಗಿ ಕೇವಲ ೩೭೦ ಮತಗಳನ್ನು ಮಾತ್ರ ಪಡೆದಿದ್ದಾರೆ. ಈ ಸನ್ನಿವೇಶವು ಮೇಲ್ಮನೆಗೆ ಸ್ಪರ್ಧಿಸಲು ಮೂಲಭೂತ ಮಾನದಂಡದ ಪ್ರಶ್ನೆಯನ್ನು ಸೃಷ್ಟಿಸಿದೆ.

ಧಾರವಾಡದಲ್ಲಿ ಅತೀ ಹೆಚ್ಚು

ಧಾರವಾಡದಲ್ಲಿ ಒಟ್ಟು ಏಳು, ಮೈಸೂರು, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ೪, ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ತಲಾ ೩, ಬೀದರ್, ಕಲಬುರಗಿ, ಚಿತ್ರದುರ್ಗ, ಹಾಸನ, ಬೆಂಗಳೂರು ನಗರ, ಮಂಡ್ಯ ಜಿಲ್ಲೆಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ೨೦ಕ್ಕಿಂತ ಕಡಿಮೆ ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತಾಪಿಸಿದವರೂ ಕೈಕೊಟ್ಟರು

ಚುನಾವಣೆಗೆ ನಾಮನಿರ್ದೇಶನ ಸಲ್ಲಿಸಲು ಓರ್ವ ಅಭ್ಯರ್ಥಿಗೆ ಅವರ ಕ್ಷೇತ್ರದಿಂದ ಕನಿಷ್ಠ ೧೦ ಜನರು ಪ್ರಪೋಸರ್‌ಗಳಿರಬೇಕು. ಆದರೆ ಈಗ ಕೆಲವು ಅಭ್ಯರ್ಥಿಗಳಿಗೆ ಶೂನ್ಯ ಮತಗಳು ಲಭಿಸಿವೆ. ಇದರಿಂದ ಆ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಪ್ರಪೋಸ್ ಮಾಡಿದವರೂ ಸಹ ಅವರಿಗೆ ಮತ ಹಾಕದೇ ಇರುವ ವಿಷಯ ಬಹಿರಂಗಗೊಂಡಂತಾಗಿದೆ. ಬೆಂಗಳೂರು ನಗರದಲ್ಲಿ ಒಬ್ಬ ಅಭ್ಯರ್ಥಿ ಹಾಗೂ ಚಿಕ್ಕಮಗಳೂರಿನಲ್ಲಿ ಇಬ್ಬರಿಗೆ ಶೂನ್ಯ ಮತಗಳು ಬಂದಿವೆ.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: MLC- election –received- less than -20 votes