ಜನತಾ ಕರ್ಫ್ಯೂ ವಿಫಲ ಎಂಬ ಆರೋಗ್ಯ ಸಚಿವರ ಹೇಳಿಕೆ ಕುರಿತು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಮೈಸೂರು,ಮೇ,6,2021(www.justkannada.in): ಕೊರೋನಾ ಮಹಾಮಾರಿ ತಡೆಗಟ್ಟಲು ಜಾರಿ ಮಾಡಲಾಗಿರುವ ಜನತಾ ಕರ್ಫ್ಯೂ ವಿಫಲ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ ಸೇಠ್, ಈ ವಿಚಾರಗಳಲ್ಲಿ ನಾನು ರಾಜಕೀಯ ಮಾಡೋಲ್ಲ.. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ.‌ ಈ ಸಂದರ್ಭದಲ್ಲಿ ನಾನು ಇಂತಹ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನನಗೆ ನಮ್ಮ ಜನರ ಆರೋಗ್ಯ ಮುಖ್ಯ.. ಅವರಿಗೆ ಬೇಕಾದ ಆರೋಗ್ಯ ರಕ್ಷಣೆ ಕುರಿತು ಶ್ರಮ ವಹಿಸಿದ್ದೇವೆ ಎಂದರಯ.

ನಮ್ಮ ಕ್ಷೇತ್ರದ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ನಾವು 50 ಅಕ್ಸಿಜನ್ ಬೇಡಿಕೆ ಇಟ್ಟಿದ್ದೆವು. ಅಲ್ಲಿ ಕೇವಲ 20 ಮಾತ್ರ ಅಕ್ಸಿಜನ್ ನೀಡಲಾಗಿದೆ. ಅದನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಆಗಬೇಕಿದೆ. ಜತೆಗೆ ಐಸಿಯು ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದೇವೆ. ಮುಡಾ ಸಹಕಾರದಲ್ಲಿ ಮೈಸೂರಿನಲ್ಲಿ ಮತ್ತಷ್ಟು ಅಕ್ಸಿಜನ್ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಲು ಸಹಕಾರ ಕೇಳಲಿದ್ದೇವೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರಕ್ಕೆ ಬಂದು ವೈದ್ಯಕೀಯ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದು ಹೇಳಿದೆ‌. ಇದು ಸ್ವಾಗರ್ತಾಹ, ಇದು ವೈದ್ಯಕೀಯ ಸಿಬ್ಬಂದಿ ಸಮಸ್ಯೆಯನ್ನು ನಿವಾರಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.MLA-Tanveer Sait- Health Minister-sudhakar- statement - Janata curfew –failure

ಮೈಸೂರಿನ ಬಹುತೇಕ ಆಸ್ಪತ್ರೆಯಲ್ಲಿ ಹೊರಗಿನಿಂದ ಬಂದ ಸೊಂಕಿತರಿಗೆ ಬೆಡ್ ನೀಡಲಾಗಿದೆ. ಇದನ್ನ ಹೆಚ್ಚಿನ ಗಮನಕೊಟ್ಟು ಮಾನಿಟರ್ ಮಾಡಬೇಕಿದೆ. ಮೊದಲು ನಮ್ಮ ಜಿಲ್ಲೆಯವರಿಗೆ ಬೆಡ್ ವ್ಯವಸ್ಥೆ ಕಲ್ಪಿಸಬೇಕಿದೆ. ಸಾರ್ವಜನಿಕರಿಗೆ ಮೊದಲು ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ. ಇದು ವಾರ್ಡ್ ಮಟ್ಟದಿಂದಲೇ ಮಾಡಬೇಕಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಮೂರನೆ ಅಲೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

Key words: MLA-Tanveer Sait- Health Minister-sudhakar- statement – Janata curfew –failure