ವಿನೂತನ ಪ್ರಯತ್ನ: ಕೊರೋನಾ ಪಾಸಿಟಿವ್ ಇರುವ ಮನೆ ಮುಂದೆ ಬಿಳಿ ಬಾವುಟ ಹಾಕಲು ತೀರ್ಮಾನ…

ಮೈಸೂರು,ಮೇ,6,2021(www.justkannada.in):  ಮೈಸೂರಿನ ಕೆ.ಆರ್. ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಪಾಸಿಟಿವ್ ಇರುವ ಮನೆ ಮುಂದೆ ಬಿಳಿ ಬಾವುಟ ಹಾಕುವ ವಿನೂತನ ಪ್ರಯತ್ನಕ್ಕೆ ತೀರ್ಮಾನ ಮಾಡಲಾಗಿದೆ.jk

ಸೋಂಕಿತರ ಮನೆ ಮುಂದೆ ಬಾವುಟ ಹಾಕುವ ಮೂಲಕ ಸೋಂಕಿತರ ಓಡಾಟ ತಡೆಯಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕೆ.ಆರ್. ವಿಧಾನಸಭಾ ಕ್ಷೇತ್ರದ ಕೋವಿಡ್ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.white-flag-in-front-of-house-corona-positive-mysore

ಈ ಕುರಿತು ಮಾಹಿತಿ ನೀಡಿರುವ ಶಾಸಕ ಎಸ್.ಎ ರಾಮದಾಸ್, ಕರೊನಾ ಚಿತ್ರವುಳ್ಳ ಬಿಳಿ ಬಾವುಟ ಹಾಕುತ್ತೇವೆ. ಮಹಾನಗರ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಾರ್ಡ್ ವಾರು ಟಾಸ್ಕ್ ಫೋರ್ಸ್ ಮಾಡಿದ್ದೇವೆ. ವೈದ್ಯ, ಪೊಲೀಸ್, ಆಶಾ ಕಾರ್ಯಕರ್ತೆ ಅವರು ಮನೆಗೆ ಬಂದು ಬಾವುಟ ಹಾಕುತ್ತಾರೆ. ಅವರೇ ಬಂದು ತೆಗೆಯುವವರೆಗೂ ಬಾವುಟ ಇರಬೇಕು. ಮನೆಯವರು ತೆಗೆದರೆ ಎಫ್‌ಐಆರ್ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

Key words: White flag -in front of- house -Corona positive-mysore