ಕೊರೋನಾ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐ ಆರ್‌- ಸಚಿವ ಎಸ್.ಟಿ ಸೋಮಶೇಖರ್ ಎಚ್ಚರಿಕೆ…

ಮೈಸೂರು,ಮೇ,6,2021(www.justkannada.in): ಕೊರೋನಾ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐ ಆರ್‌ ದಾಖಲಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಎಚ್ಚರಿಕೆ ನೀಡಿದರು.jk

ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ತುಳಸಿದಾಸ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ 100ಹಾಸಿಗೆಗಳ  ಕೋವಿಡ್ ಹೆಲ್ತ್ ಸೆಂಟರ್  ಅನ್ನು ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು. 70 ಆಕ್ಸಿಜನ್ ಬೆಡ್, 10ಐಸಿಯು ಬೆಡ್ ನಿರ್ಮಾಣ ಮಾಡಲಾಗಿದ್ದು, ಟೇಪ್ ಕತ್ತರಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೊರೋನಾ ಟೆಸ್ಟ್ ಗೆ ಕೊಟ್ಟು ಕೊಟ್ಟು ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಅಂತವರ ಲೊಕೇಶನ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐ ಆರ್‌ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.Corona Positive- Outside – FIR- Minister- ST Somashekhar.

ಲಾಕ್ ಡೌನ್ ಬೇಕೊ ಬೇಡ್ವೊ ಅನ್ನೋ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. 12ರ ವರೆಗೂ ಈ ನಿಯಮವೇ ಮುಂದುವರೆಯುತ್ತದೆ. ಮೇ 11 ರ ಸಂಜೆ ಮುಂದೆ ಏನು ಮಾಡ್ಬೇಕು ಅನ್ನೋದನ್ನು ಸಿಎಂ ತಿರ್ಮಾನ ಮಾಡುತ್ತಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಸ್ಪಷ್ಟನೆ ನೀಡಿದರು.

Key words: Corona Positive- Outside – FIR- Minister- ST Somashekhar.