ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ಕಿಡಿ

Promotion

ಬೆಳಗಾವಿ,ಅಕ್ಟೋಬರ್,5,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ಖಂಡಿಸಿದ್ದಾರೆ.jk-logo-justkannada-logo

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್,  ಡಿ.ಕೆ.ಶಿವಕುಮಾರ್ ಅವರ ಮನೆ ಮೇಲಿನ ಸಿಬಿಐ ದಾಳಿ ರಾಜಕೀಯ ದುರದ್ಧೇಶದಿಂದ ಕೂಡಿದೆ. ಉಪಚುನಾವಣೆ ಒಂದು ತಿಂಗಳು ಇರುವಾಗ ದಾಳಿ ನಡೆದಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಸಕ್ರಿಯರಾಗಿದ್ದಾರೆ. ಬೈ ಎಲೆಕ್ಷನ್ ಗೆ ನಾವು ಎಲ್ಲರೂ ಆ್ಯಕ್ಟಿವ್ ಆಗಿದ್ದವು. ಇಂತಹ ಸಂದರ್ಭದಲ್ಲಿ ದಾಳಿ ನಡೆಸಿರುವ ಉದ್ದೇಶ ಏನು ಎಂದು ಕಿಡಿಕಾರಿದ್ದಾರೆ.mla-laxmi-hebbalkar-outrage-cbi-attack-dk-shivakumar-residence

ಈ ದಾಳಿಗಳನ್ನು ಎದುರಿಸಲು ನಮ್ಮ ನಾಯಕರು ಸಮರ್ಥರಿದ್ದಾರೆ. ಕಾನೂನು ಮೇಲೆ ನಂಬಿಕೆ ಇದೆ. ಕಾನೂನಿಗೆ ಪ್ರತಿಯೊಬ್ಬರೂ ತಲೆ ಬಾಗಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Key words: MLA- Laxmi Hebbalkar -outrage -CBI -attack -DK Shivakumar -residence