ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಪ್ತನಿಗೂ ಸಿಬಿಐ ಶಾಕ್..

ಹಾಸನ,ಅಕ್ಟೋಬರ್,5,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿಯಾದ ಬೆನ್ನಲ್ಲೆ ಇದೀಗ ಡಿ.ಕೆ ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಗೂ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ.jk-logo-justkannada-logo

ಡಿ.ಕೆ.ಶಿವಕುಮಾರ್ ಆಪ್ತ ಸಚಿನ್ ನಾರಾಯಣ್ ಅವರ ಹಾಸನದ ಬಿಎಂ ರಸ್ತೆಯಲ್ಲಿರುವ ಮನೆ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಐವರು ಅಧಿಕಾರಿಗಳ ತಂಡ ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದೆ ಎನ್ನಲಾಗಿದೆ.Former Minister -DK Shivakumar –friend- sachin narayan- CBI

ಕಳೆದ ಬಾರಿ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿಯಾದ ವೇಳೆ ಸಚಿನ್ ನಾರಾಯಣ್ ಅವರ ನಿವಾಸದ ಮೇಲೂ ದಾಳಿಯಾಗಿತ್ತು. ಇದೀಗ ಮೂರನೇ ಬಾರಿ ಸಚಿನ್ ನಾರಾಯಣ್ ಮನೆ ಮೇಲೆ ದಾಳಿಯಾಗಿದೆ. ಇನ್ನು ಬೆಳ್ಳಂಬೆಳಗ್ಗೆ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ನಿವಾಸ, ಕಚೇರಿ ಸೇರಿದಂತೆ ಏಕಕಾಲಕ್ಕೆ 14 ಕಡೆಗಳಲ್ಲಿ ಸಿಬಿಐ ರೇಡ್ ಮಾಡಿದ್ದು, ಸಿಬಿಐ 50 ಲಕ್ಷ ರೂ ನಗದು ಜಪ್ತಿ ಮಾಡಿದೆ ಎಂದು ಹೇಳಲಾಗುತ್ತಿದೆ.

Key words: Former Minister -DK Shivakumar –friend- sachin narayan- CBI