ವಿಧಾನಪರಿಷತ್ ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ.

ಬೆಳಗಾವಿ,ಡಿಸೆಂಬರ್,23,2022(www.justkannada.in):ವಿಧಾನಪರಿಷತ್ಉಪಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆಪ್ರಾಣೇಶ್ಆಯ್ಕೆಯಾಗಿದ್ದಾರೆ.

ಇಂದು  ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಿತು.  ಎಂ,ಕೆ ಪ್ರಾಣೇಶ್ 39 ಮತ ಪಡೆಯುವ ಮೂಲಕ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಅರವಿಂದ ಅರಳಿ 26 ಮತ ಪಡೆದರು.

ಜೆಡಿಎಸ್ ಯಾರೊಬ್ಬರೂ ಕೂಡ ಮತ ಚಲಾಯಿಸದೆ ತಟಸ್ಥವಾಗಿದ್ದರು. ಸದನದಲ್ಲಿ 39 ಬಿಜೆಪಿ ಸದಸ್ಯರು, 26 ಕಾಂಗ್ರೆಸ್ ಸದಸ್ಯರು, 8 ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು.

Key words: MK Pranesh – elected – Deputy Chairman – Legislative Council.