ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಡಾ ಪಿ ಎಸ್ ಹರ್ಷ ಅಧಿಕಾರ ಸ್ವೀಕಾರ

 

ಬೆಂಗಳೂರು, ಜೂನ್ 29, 2020. (www.justkannada.in news) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಡಾ ಪಿ ಎಸ್ ಹರ್ಷ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಡಾ ಪಿ ಎಸ್ ಹರ್ಷ ಅವರು ಈ ಹಿಂದೆಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್ ಎನ್ ಸಿದ್ದರಾಮಪ್ಪ ಅವರು ಡಾ ಪಿ ಎಸ್ ಹರ್ಷ ಅವರಿಗೆ ಅಧಿಕಾರ ಹಸ್ತಾಂತರಿಸಿ ಎಲ್ಲ ರೀತಿಯಲ್ಲೂ ಒಳಿತಾಗಲಿ ಎಂದು ಶುಭ ಹಾರೈಸಿದರು.

ಎಸ್ ಎನ್ ಸಿದ್ದರಾಮಪ್ಪ ಅವರು ಬೆಂಗಳೂರಿನ ಸಿ ಐ ಡಿ ಯ ಆರ್ಥಿಕ ಅಪರಾಧಗಳ ವಿಭಾಗದ ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

DR P S HARSHA -ASSUMES CHARGE - COMMISSIONER FOR INFORMATION AND PUBLIC RELATIONS.

key words : DR P S HARSHA -ASSUMES CHARGE – COMMISSIONER FOR INFORMATION AND PUBLIC RELATIONS.

ENGLISH SUMMARY : 

DR P S HARSHA ASSUMES CHARGE AS COMMISSIONER FOR INFORMATION AND PUBLIC RELATIONS

BENGALURU, JUNE 29: Senior Police Officer Dr P S Harsha, who was the Commissioner of Police at Mangaluru, assumed charge as Commissioner for the Department of Information and Public Relations here on Monday.
Dr P S Harsha had earlier served as the Commissioner of Information and Public Relations.
Mr S N Siddaramappa, who was Commissioner for the Department of Information and Public Relations, handed over the charge to Dr P S Harsha and wished him all the best.
Mr S N Siddaramappa has taken over charge as Deputy Inspector General of Police, C I D ( Economic Offences Wing )in Bengaluru.