ವಿಶ್ವ ಸುಂದರಿ 2019: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್, ಜಮೈಕಾದ ಟೋನಿ ಆನ್ ಸಿಂಗ್’ಗೆ ಕಿರೀಟ

Promotion

ಲಂಡನ್, ಡಿಸೆಂಬರ್ 12, 2019 (www.justkannada.in): 2019ರ ವಿಶ್ವ ಸುಂದರಿ ಪ್ರಕಟವಾಗಿದ್ದು, ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್ ಆದರೆ ಜಮೈಕಾದ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಈ ವರ್ಷದ ವಿಶ್ವ ಸುಂದರಿ ಅಂತಿಮ ಸುತ್ತು ಶನಿವಾರ ರಾತ್ರಿ ನಡೆದಿದ್ದು ಅಂತಿಮ ಪ್ರಶಸ್ತಿ ಪ್ರಕಟವಾಗಿದೆ. ಭಾರತದಿಂದ ಪ್ರತಿನಿಧಿಸಿದ್ದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್ ಆದರು. ಇದೇ ವೇಳೆ ಫ್ರಾನ್ಸ್ ನ ಒಫೇಲಿ ಮೆಝಿನೋ ಪ್ರಥಮ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವಿಶ್ವ ಸುಂದರಿ ಪಟ್ಟಕ್ಕೇರಿದ ಜಮೈಕಾದ ಟೋನಿ ಆನ್ ಸಿಂಗ್ ಅವರಿಗೆ 2018ರ ಮಿಸ್ ವರ್ಲ್ಡ್ ಮೆಕ್ಸಿಕೋ ದ ವೆನೆಸ್ಸಾ ಪೋನ್ಸ್ ವಿಶ್ವ ಸುಂದರಿ ಕಿರೀಟವಿಟ್ಟರು. ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತು ನವೆಂಬರ್ 20ರಂದು ಆರಂಭವಾಗಿತ್ತು. 2019ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ಸುಮನ್ ರಾವ್ ರಾಜಸ್ಥಾನ ಮೂಲದವರು.