ತೆರೆ ಮೇಲೆ ಬರಲಿದೆ ಗೋವಾ ಸಿಎಂ ದಿ.ಮನೋಹರ್ ಪರಿಕ್ಕರ್ ಬಯೋಪಿಕ್ !

ಪಣಜಿ, ಡಿಸೆಂಬರ್ 12, 2019 (www.justkannada.in): ಕೇಂದ್ರದ ಮಾಜಿ ಸಚಿವ, ಗೋವಾದ ಮಾಜಿ ಸಿಎಂ ದಿ.ಮನೋಹರ್ ಪರಿಕ್ಕರ್ ಜೀವನಾಧರಿತ ಸಿನಿಮಾ ಮಾಡಲು ಗೋ ಗೋವಾ ಗಾಲಿವುಡ್ ಪ್ರೊಡಕ್ಷನ್ ಹೌಸ್ ಮುಂದಾಗಿದೆ.

ಈಗಾಗಲೇ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರ ಜೊತೆಗೆ ಮಾತುಕತೆ ನಡೆಸಿರುವ ಗೋ ಗೋವಾ ಗಾಲಿವುಡ್ ಪ್ರೊಡಕ್ಷನ್ ಹೌಸ್ ಗೆ ಉತ್ಪಲ್ ಹಾಗೂ ಅವರ ಕುಟುಂಬದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಸಿನಿಮಾ ನಿರ್ಮಾಣ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಿವುಡ್ ನಲ್ಲಿ ಬಯೋಪಿಕ್ ಸಿನಿಮಾಗಳು ಹೆಚ್ಚಾಗಿ ತಯಾರಾಗುತ್ತಿದ್ದು, ಕಂಗನಾ ಜಯಲಲಿತಾ ಪಾತ್ರ ಮಾಡುತ್ತಿರುವ ಬೆನ್ನಲ್ಲೇ ಮತ್ತೊಬ್ಬ ರಾಜಕಾರಣಿ ಬಯೋಪಿಕ್’ಗೆ ಸಿದ್ಧತೆ ಶುರುವಾಗಿದೆ.