ಮೈಸೂರು ಕೆ.ಆರ್ ಆಸ್ಪತ್ರೆಗೆ ಭೇಟಿ: ಕೊರೋನಾ ಕುರಿತು ಜನರ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ವಿ. ಸೋಮಣ್ಣ …

Promotion

ಮೈಸೂರು,ಮಾ,21,2020(www.justkannada.in): ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆ  ಸರ್ಕಾರ ಜಿಲ್ಲಾಡಳಿತ ಎಲ್ಲವು ಜನರ ಸುರಕ್ಷತೆಗೆ ನಿಂತಿವೆ. ಆದ್ರೆ ಜನರು ಇದನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

ಕರೋನ ಭೀತಿ ಹಿನ್ನೆಲೆ. ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಭೇಟಿ ನೀಡಿ ಸ್ವತಃ ಮಾಸ್ಕ್ ಧರಿಸಿ ಕರೋನಾಗೆ ಚಿಕಿತ್ಸಾ ಸಿದ್ದತೆಗಳ ಪರಿಶೀಲನೆ ನಡೆಸಿದರು. ಸಚಿವ ಸೋಮಣ್ಣಗೆ ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾಥ್ ನೀಡಿದರು.  ಈ ವೇಳೆ ಕೊರೋನಾ ಬಗ್ಗೆ ಮುಂಜಾಗ್ರತಾ ಕ್ರಮದ ಕುರಿತು ಆಸ್ಪತ್ರೆ ಅಧಿಕಾರಿಗಳಿಂದ ಸಚಿವ ಸೋಮಣ್ಣ ಮಾಹಿತಿ ಸಂಗ್ರಹಿಸಿದರು.minister-v-somanna-visit-kr-hospital-corona-virus

ಬಳಿಕ ಸಚಿವ ಸೋಮಣ್ಣ ಮಾಧ್ಯಮಗಳ ಜತೆ ಮಾತನಾಡಿ ಕೊರೋನಾ ಕುರಿತಾಗಿ ಜನರ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೆ.ಆರ್.ಆಸ್ಪತ್ರೆಗೆ ನಾನು ಭೇಟಿ ನೀಡಿ ಸ್ಥಿತಿ ಗಮನಿಸಿದ್ದೇನೆ. ಇಲ್ಲಿ ಇನ್ನು ಜನರಿಗೆ ಕೊರೋನಾ ವೈರಸ್ ಸಿರಿಯಸ್ನೆಸ್ ಅರ್ಥವಾಗಿರೋ ರೀತಿ ಕಾಣ್ತಿಲ್ಲ. ಇದು ಬೇಸರದ ವಿಚಾರ. ಸರ್ಕಾರ ಜಿಲ್ಲಾಡಳಿತ ಎಲ್ಲವು ಜನರ ಸುರಕ್ಷತೆಗೆ ನಿಂತಿವೆ. ಆದ್ರೆ ಜನರು ಇದನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ಇನ್ನಾದ್ರು ಜನರು ಕೊರೋನಾ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಹೇಳಿದರು.

ಮೈಸೂರಿನ ಅರಮನೆ ಮಂಡಳಿ ಕಚೇರಿಯಲ್ಲಿ ಸಚಿವ ವಿ.ಸೋಮಣ್ಣ ಸಭೆ….

ಮಹಾಮಾರಿ ಕೊರೋನ ವೈರೆಸ್ ಭೀತಿ ಹಿನ್ನಲೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಮೈಸೂರಿನ ಅರಮನೆ ಮಂಡಳಿ ಕಚೇರಿಯಲ್ಲಿ ಸಭೆ ನಡೆಸಿದರು. ಕೊರೊನಾ, ಹಕ್ಕಿಜ್ವರ, ಹಾಗೂ ಮೈಸೂರು ನಗರದ ಸ್ವಚ್ಚತೆ ಸಂಬಂಧ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ ದೇವೇಗೌಡ, ನಾಗೇಂದ್ರ, ಮೇಯರ್, ಜಿ.ಪಂ ಅಧ್ಯಕ್ಷೆ ಸೇರಿದಂತೆ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಸಚಿವ ಸೋಮಣ್ಣ ಚರ್ಚಿಸಿದರು.

Key words: minister V. Somanna-Visit – KR Hospital-corona virus