ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ವಿ.ಸೋಮಣ್ಣ…

ಬೆಂಗಳೂರು,ಸೆ,3,2019(www.justkannada.in): ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಟಾಂಗ್ ಕೊಟ್ಟಿರುವ ವಸತಿ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಅವರ ದೃಷ್ಟಿಕೋನ ಯಾವ ರೀತಿ ಇದೆಯೋ ಗೊತ್ತಿಲ್ಲ, ಸಿದ್ದರಾಮಯ್ಯ ತಮ್ಮ‌ ಅನುಭವದಲ್ಲಿ ಮಧ್ಯಂತರ ಚುನಾವಣೆ ಬರುತ್ತೆ ಅಂದಿದಾರೆ. ಆದ್ರೆ ನನ್ನ ಅನುಭದಲ್ಲಿ‌ ರಾಜ್ಯದಲ್ಲಿ‌ ಮಧ್ಯಂತರ ಬರಲ್ಲ ಎಂದು ಹೇಳಿದರು.

ವಿಕಾಸಸೌಧದಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ಸಿಎಂ ಬಿಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮೂರು ವರ್ಷ ಒಂಭತ್ತು ತಿಂಗಳು ಇರುತ್ತೆ. ಬಳಿಕ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿಯೇ ಗೆದ್ದು ಅಧಿಕಾರ ಹಿಡಿಯಲಿದೆ. ಜನ ಕೂಡಾ ಸಧ್ಯಕ್ಕೆ ಚುನಾವಣೆ ಬಯಸ್ತಿಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ಸಿಎಂ ಆಗ್ತಾರೆ ಅಂದ್ರೆ ಬರ ಹೋಗುತ್ತೆ. ಅನಾವೃಷ್ಟಿ ಹೋಗಿ ಅತಿವೃಷ್ಟಿ ಬರುತ್ತೆ. ಅತಿವೃಷ್ಟಿ ಯಿಂದ ಒಂದು ವಾರದಲ್ಲಿ ಎಲ್ಲ‌ ಡ್ಯಾಂಗಳೂ ತುಂಬಿವೆ. ಇದು ಯಡಿಯೂರಪ್ಪ ನವರ ಅದೃಷ್ಟ. ಅತಿವೃಷ್ಟಿ ಹಾನಿ ಎದುರಿಸುವ ಕ್ರಮಗಳ ಜಾರಿ ಮಾಡಿದ್ದೀವಿ ಎಂದರು.

ವಸತಿ ಇಲಾಖೆಯಲ್ಲಿ ಹಿಂದಿನ ಸರ್ಕಾರ ಜಾರಿ ಮಾಡಿರುವ ಯೋಜನೆಗಳ ತಡೆ ಇಲ್ಲ. ಅವರ ಕಾಲದ ಎಲ್ಲ ಯೋಜನೆಗಳನ್ನೂ ಮುಂದುವರೆಸುತ್ತೇವೆ. ಜನರಿಗೆ ಒಳ್ಳೆಯದಾಗಬೇಕಷ್ಟೇ ಎಂದು ಸೋಮಣ್ಣ ಹೇಳಿದರು.

ತಮ್ಮ ವಿರುದ್ಧ ದೂರು, ವಿಚಾರಣೆ ರಾಜಕೀಯ ಪ್ರೇರಿತ ಎಂಬ ಡಿಕೆಶಿ, ಕೈಬಲನಾಯಕರ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಕಾಂಗ್ರೆಸ್ ನವರು ಅರ್ಥ ಮಾಡ್ಕೋಬೇಕು. ಕೇಂದ್ರದವರಿಗೆ ಅಧಿಕಾರ ಮಾಡೋದು ಗೊತ್ತು. ಇಡಿ, ಐಟಿ ದೂರಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿಲ್ಲ. ಸನ್ನಿವೇಶ, ಸಂದರ್ಭ ಹೇಗೆ ಇರುತ್ತೋ ಹಾಗೆ ನಡೆಯುತ್ತೆ ಎಂದರು.

Key words: minister -V Somanna- Siddaramaiah -statement -election.