Saturday, August 22, 2026

BDA Apartments

Home Front Page ವಾಲ್ಮೀಕಿ ಹೆಸರಿನ ತೆಲಗು ಚಿತ್ರ ಬಿಡುಗಡೆಗೆ ನಿಷೇಧ ಹೇರುವಂತೆ ಆಗ್ರಹ: ಮೈಸೂರಿನಲ್ಲಿ ಪ್ರತಿಭಟನೆ…

ವಾಲ್ಮೀಕಿ ಹೆಸರಿನ ತೆಲಗು ಚಿತ್ರ ಬಿಡುಗಡೆಗೆ ನಿಷೇಧ ಹೇರುವಂತೆ ಆಗ್ರಹ: ಮೈಸೂರಿನಲ್ಲಿ ಪ್ರತಿಭಟನೆ…

ಮೈಸೂರು,ಸೆ,3,2019(www.justkannada.in): ವಾಲ್ಮೀಕಿ ಹೆಸರಿನ ತೆಲಗು ಚಿತ್ರ ಬಿಡುಗಡೆಗೆ ನಿಷೇಧ ಹೇರುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಾಯಕ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತೆಲುಗಿನಲ್ಲಿ ವಾಲ್ಮೀಕಿ ಹೆಸರನ್ನಿಟ್ಟು ಅಶ್ಲೀಲ ಹಾಗೂ ರೌಡಿಸಂ ಕಥೆಯುಳ್ಳ ಚಿತ್ರ ನಿರ್ಮಾಣ ಮಾಡಿದ್ದಾರೆ.ಇದನ್ನ ಬಿಡುಗಡೆ ಮಾಡಬಾರದು. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ. ರಾಮಾಯಣವನ್ನು ಬರೆದ ವಾಲ್ಮೀಕಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಆಗ್ರಹಿಸಿದರು

ಜೊತೆಗೆ ವಾಲ್ಮೀಕಿ ಹೆಸರಿನಲ್ಲಿ ಅವಹೇಳನಕಾರಿ ಪೋಷ್ಟರ್ ಹಾಕುತ್ತಿರೊದು ಸರಿಯಲ್ಲ. ಈ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ನಾಯಕ ಪಡೆ ಸದಸ್ಯರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Key words: Protests – Mysore- demanding -ban – Telugu -film – Valmiki