ಮೈಸೂರಿನ 4 ಮಕ್ಕಳಿಗೆ ಬಾಲಶ್ರೀ ಪ್ರಶಸ್ತಿ ವಿತರಿಸಿದ ಸಚಿವ ಎಸ್.ಟಿ. ಸೋಮಶೇಖರ್….

ಮೈಸೂರು, ಮಾಚ್೯.19.2021(www.justkannada.in):  ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶುಕ್ರವಾರ ಬಾಲಪ್ರಶಸ್ತಿ ಪಡೆದ ಮೈಸೂರಿನ 4 ಮಕ್ಕಳಿಗೆ ಪ್ರಶಸ್ತಿಯನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ಅವರು ವಿತರಿಸಿದರು.jk

ಬಾಲಶ್ರೀ ಪ್ರಶಸ್ತಿಗೆ ದೇಶದಲ್ಲಿ 80 ಮಕ್ಕಳು 2016ರಲ್ಲಿ ಆಯ್ಕೆಯಾಗಿದ್ದರು. 2018ರಲ್ಲಿ ದೆಹಲಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕರ್ನಾಟಕದಿಂದ ಒಟ್ಟು 7 ಮಕ್ಕಳು ಆಯ್ಕೆಯಾಗಿದ್ದು, ಅವರಲ್ಲಿ ಮೈಸೂರಿನ 19 ವರ್ಷದ ಸಿಂಧು ಎಸ್. ಶಾಸ್ತ್ರಿ,  17 ವರ್ಷದ ಆಕಾಂಕ್ಷ್ ಸಿ.ಜೆ, 15 ವರ್ಷದ ತುಷಾರ್ ಎನ್.ಭಾರಧ್ವಜ್  ಮತ್ತು 12 ವರ್ಷದ ವರ್ಷ ಎನ್.ಕೆ. ಅವರು ಆಯ್ಕೆಯಾಗಿದ್ದರು.

ಸಿಂದೂ ಎಸ್.ಶಾಸ್ತ್ರಿ ಅವರು ಸೃಜನಶೀಲ ಬರವಣಿಗೆ (creative wiring) ಕ್ಷೇತ್ರದಲ್ಲಿ, ಆಕಾಂಕ್ಷ್ ಸಿ.ಜೆ ಅವರು ವೈಜ್ಞಾನಿಕ ಸಮಸ್ಯೆ ಪರಿಹಾರ (scientific problem solving) ಕ್ಷೇತ್ರದಲ್ಲಿ ಹಾಗೂ   ತುಷಾರ್ ಎನ್.ಭಾರಧ್ವಜ್ ಅವರು ಏಕಪಾತ್ರಾಭಿನಯ ಕ್ಷೇತ್ರದಲ್ಲಿ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ಪಡೆದರೆ,  ವರ್ಷ ಎನ್.ಕೆ ಅವರು ಸೈನ್ಸ್ ಮೇಕಿಂಗ್ ಮಾಡೇಲ್ ಕ್ಷೇತ್ರದಲ್ಲಿ ಬಾಲಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಶಸ್ತಿಯನ್ನು ಪಡೆದ ಮಕ್ಕಳಿಗೆ ಎಂ.ಹೆಚ್.ಆರ್.ಡಿ/ಪ್ರಧಾನ ಮಂತ್ರಿಗಳು ಅಥವಾ ರಾಷ್ಟಪತಿಗಳು ಸನ್ಮಾನಿಸಿ ಗೌರವಿಸಬೇಕಿತ್ತು, ಆದರೆ ಕೋವಿಡ್-19 ಕಾರಣದಿಂದಾಗಿ ಪ್ರಶಸ್ತಿಯನ್ನು ಬೆಂಗಳೂರಿನ ಬಾಲಭವನದಲ್ಲಿ ನೀಡಲಾಗಿತ್ತು.minister-st-somashekhar-distributed-balasree-award-4-children-mysore

ಇದೇ ಸಂದರ್ಭದಲ್ಲಿ  ಶಾಸಕರಾದ ಎಲ್.ನಾಗೇಂದ್ರ,  ಕೆ.ಮಹದೇವು,  ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್,  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಸಿಇಒ ಎ.ಎನ್.ಯೋಗೇಶ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಸೇರಿದಂತೆ ಇತರರು  ಉಪಸ್ಥಿತರಿದ್ದರು.

Key words: Minister – ST Somashekhar -distributed – Balasree award – 4 children -Mysore.