ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರ ಬೆಂಬಲ ಸಿಗಲಿಲ್ಲ- ಶಾಸಕ ಕೆ.ಮಹದೇವ್

ಮೈಸೂರು,ಮಾರ್ಚ್,19,2021(www.justkannada.in):  ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರ ಬೆಂಬಲ ಸಿಗಲಿಲ್ಲ. ಇದರ ನೋವು ನನಗೂ ಇದೆ, ಕಾರ್ಯಕರ್ತರಿಗೂ ಇದೆ ಎಂದು ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ. ಮಹದೇವ್ ಬೇಸರ ವ್ಯಕ್ತಪಡಿಸಿದರು.jk

ಈ ಕುರಿತು ಇಂದು ಮಾದ್ಯಮಗಳ ಜತೆ ಮಾತನಾಡಿದ ಶಾಸಕ ಕೆ.ಮಹದೇವ್,  ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರೇ ಬೆಂಬಲ ನೀಡಲಿಲ್ಲ. ಆದರೆ ಇದನ್ನ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಮೈಮುಲ್ ಚುನಾವಣೆ ರಾಜಕೀಯೇತರ ಚುನಾವಣೆ ಆಗಿದೆ. ಆ ಚುನಾವಣೆಯಲ್ಲಿ ನನ್ನ ಮಗ ನಿಂತು ಗೆದ್ದಿರುವುದು ಸಂತೋಷವಾಗಿದೆ. ಇದಕ್ಕೆ ಕಾರಣವಾದ ಎಲ್ಲ ಹಾಲಿನ ಡೈರಿ ಸದಸ್ಯರಿಗೂ ಧನ್ಯವಾದ ಹೇಳುತ್ತೇನೆ ಎಂದರು.mymul-election-not-support-our-party-leaders-my-son-mla-k-mahadev

ಚುನಾವಣೆಗೆ ನಿಂತಮೇಲೆ ಸೋಲಿಸೋಕೆ ಪ್ರಯತ್ನ ಪಡೋದು ಸಹಜ. ಅದರ ಮಧ್ಯಯೇ ಎಲ್ಲರು ನನ್ನ ಮಗನ ಮೇಲೆ ವಿಶ್ವಾಸ ಇಟ್ಟಿದ್ದು ಖುಷಿ ತಂದಿದೆ ಎಂದು ಶಾಸಕ ಕೆ. ಮಹದೇವ್ ಸಂತಸ  ವ್ಯಕ್ತಪಡಿಸಿದರು.

Key words: Mymul- election- not support -our party- leaders- My son – MLA- K. Mahadev.