ಗೋ ಬ್ಯಾಕ್ ಪೋಸ್ಟರ್ ಬಗ್ಗೆ ಬೇರೆ ಪಕ್ಷದವರ ಮೇಲೆ ಅನುಮಾನ ವ್ಯಕ್ತಪಡಿಸಿದ ಸಚಿವ ಆರ್.ಅಶೋಕ್.

Promotion

ಮಂಡ್ಯ,ಜನವರಿ,26,2023(www.justkannada.in) : ಡ್ಯದಲ್ಲಿ ಗೋಡೆಗಳ ಮೇಲೆ ಗೋ ಬ್ಯಾಕ್ ಆರ್.ಅಶೋಕ್ ಎಂಬ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಅಶೋಕ್ ಬೇರೆ ಪಕ್ಷಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಬದಲಾವಣೆಯಾದ ಬೆನ್ನಲ್ಲೆ ಮಂಡ್ಯದಲ್ಲಿ ಗೋಡೆಗಳ ಮೇಲೆ ಗೋ ಬ್ಯಾಕ್ ಆರ್.ಅಶೋಕ್ ಎಂಬ ಪೋಸ್ಟರ್ ಅಂಟಿಸಲಾಗಿತ್ತು.  ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಉಂಟಾಗಿದೆ ಎಂಬ ಸುದ್ದಿಯಾಗಿತ್ತು.

ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಮಂಡ್ಯಕ್ಕೆ ನಾನು ಬಂದಿರುವುದರಿಂದ ಬೇರೆ ಪಕ್ಷದವರಿಗೆ ಭಯವಾಗುತ್ತಿದೆ. ಭಯದಿಂದ ಬೇರೆ ಪಕ್ಷದವರು ಬಾಯ್ಕಟ್ ಪೋಸ್ಟರ್ ಅಂಟಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಚುನಾವಣೆ ಬರುವ ಮುನ್ನವೇ ನನಗೆ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕಿದೆ. ನನಗೆ ಇದು ಮೊದಲನೇನಲ್ಲ. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳನ್ನು ಪುನರಾರಂಭಿಸಲು ನಮ್ಮ ಸರ್ಕಾರವೇ ಬರಬೇಕಾಯಿತು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಇದನ್ನು ಮನಗಾಣಬೇಕಿದೆ ಎಂದು ಸಚಿವ ಅಶೋಕ್ ಟಾಂಗ್ ನೀಡಿದರು.

Key words: Minister -R. Ashok -doubts -about – Go Back -poster.