ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ.

 ರಾಯಚೂರು,ಜನವರಿ,26,2023(www.justkannada.in):  ಹಾಸನದಿಂದ ಜೆಡಿಎಸ್ ಅಭ್ಯರ್ಥಿಗಳಾಗಿ ಭವಾನಿ ರೇವಣ್ಣಗೆ ಟಿಕೆಟ್ ಸಿಗಲಿದೆ ಎಂದು ಹಬ್ಬಿದ್ದ ಊಹಾಪೋಹಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.

ಈ ಕುರಿತು ರಾಯಚೂರಿನಲ್ಲಿ ಮಾತನಾಡಿ ಸ್ಪಷ್ಟನೆ ನೀಡಿರುವ ಹೆಚ್.ಡಿ ಕುಮಾರಸ್ವಾಮಿ, ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ  ಟಿಕೆಟ್ ಘೋಷಣೆ ಮಾಡಲಗಿದೆ. ಸಮರ್ಥ ಅಭ್ಯರ್ಥಿ ಇದ್ದಾಗ ಸ್ಪರ್ಧೆಗೆ ಇಳಿಸಲ್ಲ.  ಕುಟುಂಬದವರನ್ನ ಸ್ಪರ್ಧೆಗೆ ಇಳಿಸುವುದಿಲ್ಲ ಈಗಾಗಲೇ ಏನು ಹೇಳಬೇಕೋ  ಹೇಳಾಗಿದೆ ನಾಲ್ಕೈದು ಜನ ಹೇಳಿದ ಮಾತ್ರಕ್ಕೆ ನಿರ್ಧಾರ ಆಗಲ್ಲ ಎಂದರು.

ಪದೇ ಪದೇ ಈ ಬಗ್ಗೆ ಸಮಜಾಯಿಷಿ ಕೊಡಬೇಕಿಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸವಿರುತ್ತೆ. ಅಭಿಮಾನದಿಂದ ಮಾತನಾಡಿರುತ್ತಾರೆ . ಅಭಿಮಾನದಿಂದ ಮಾತನಾಡಿದ್ದನ್ನ ಅಭಿಪ್ರಾಯ ಎನ್ನಲು ಆಗುವುದಿಲ್ಲ. ಇನ್ನು ಉಳಿದುದ್ದನ್ನ ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: no ticket -Bhavani Revanna –Hassan-Former CM- HD Kumaraswamy