ರೋಷನ್ ಬೇಗ್ ಸಸ್ಪೆಂಡ್ ವಿಚಾರ ಸಮರ್ಥಿಸಿಕೊಂಡ ಸಚಿವ ಕೃಷ್ಣೇಭೈರೇಗೌಡ…

Promotion

ಶಿವಮೊಗ್ಗ,ಜೂ,19,2019(www.justkannada.in):  ಕಾಂಗ್ರೆಸ್ ಪಕ್ಷದಿಂದ ಶಿವಾಜಿನಗರ ಶಾಸಕ ರೋಷನ್ ಬೇಗ್ ಅಮಾನತು ಮಾಡಿರುವುದುನ್ನ ಸಮರ್ಥಿಸಿಕೊಂಡಿರುವ ಸಚಿವ ಕೃಷ್ಣೇಭೈರೇಗೌಡ,  ರೋಷನ್ ಬೇಗ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದರೇ ಹೀಗೆಲ್ಲಾ ಆಗುತ್ತಿರಲಿಲ್ಲ. ಆದರೇ ಮಂತ್ರಿ ಸ್ಥಾನ ನೀಡದ ಕಾರಣ ಆ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರನ್ನ ಅಮಾನತು ಮಾಡಿದ್ದು ಸರಿಯಾಗಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೃಷ್ಣೇಭೈರೇಗೌಡ, ರೋಷನ್ ಬೇಗ್  ಒಬ್ಬ ಅವಕಾಶವಾದಿ ರಾಜಕಾರಣಿ.  ಅವರ ಆರೋಪ ನಿರಾಧಾರ. ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಕ್ಕೆ  ಅವರನ್ನ ಅಮಾನತ್ತು ಮಾಡಲಾಗಿದೆ. ರೋಷನ್ ಬೇಗ್ ಹೀಗೆ ಮಾಡೋಕೆ ಅವರಿಗೆ ಮಂತ್ರಿ ಸ್ಥಾನ ನೀಡದೆ ಇರುವುದು ಕಾರಣ. ಮಂತ್ರಿ ಸ್ಥಾನವನ್ನು ನೀಡಿದ್ದರೇ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ನಡೆದುಕೊಂಡಿದ್ದರಿಂದ ಅವರನ್ನ ಸಸ್ಪೆಂಡ್ ಮಾಡಲಾಗಿದೆ. ಅವರ ಕೀಳುಮಟ್ಟದ ವರ್ತನೆ ಸಹಿಸಲು ಆಗಲ್ಲ. ಭಿನ್ನಾಭಿಪ್ರಾಯ ಸಹಜ. ಅದನ್ನ ಪಕ್ಷದಲ್ಲೇ ಸರಿಪಡಿಸಿಕೊಳ್ಳಬಹುದಿತ್ತು. ಆದರೆ ದಾರಿಯಲ್ಲಿ ಮಾತನಾಡಿದ್ದಾರೆ. ಅವರನ್ನ ಅಮಾನತು ಮಾಡಿದ ಕ್ರಮ ಸರಿಯಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ  ಸಮರ್ಥಿಸಿಕೊಂಡರು.

Key words: Minister- Krishnabhairaigowda- defended – Roshan Baig -suspension.